Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಪಕ್ಷದಲ್ಲಿ ಇರೋದೇ ಒಂದು ಸೌಭಾಗ್ಯ

Congress party
bangalore , ಗುರುವಾರ, 24 ಆಗಸ್ಟ್ 2023 (16:13 IST)
ಕಾಂಗ್ರೆಸ್ ಪಕ್ಷ ಬಸ್ ರೈಡ್ ತರ...ಹತ್ತಿದ ಮೇಲೆ ಕೊನೆತನಕ ಕುಳಿತುಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಇದ್ದರೆ ಹಿರಿತನವೂ ಇರುತ್ತೆ, ಅಧಿಕಾರವೂ ಸಿಗುತ್ತೆ. ಕಾಂಗ್ರೆಸ್ ಪಕ್ಷದಲ್ಲಿ ಇರೋದೆ ಒಂದು ಸೌಭಾಗ್ಯ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಿ ಮತ್ತೆ ಬರುತ್ತಿರುವವರಿಗೆ ಪರೋಕ್ಷವಾಗಿ ಡಿಕೆಶಿ ಕುಟುಕಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ ಎಲ್ಲಾ 5 ಯೋಜನೆಗಳು ಜಾರಿಯಾಗಿವೆ.

ವ್ಯಕ್ತಿಗಿಂತ ಪಕ್ಷದ ಕಾರ್ಯಕ್ರಮ ಬಹಳ ಮುಖ್ಯ. ಕಾಂಗ್ರೆಸ್ ಪಕ್ಷ ಎಲ್ಲಾ ಧರ್ಮ, ಜಾತಿ ಜನರ ಬದುಕಿನಲ್ಲಿ ಬದಲಾವಣೆ ತರ್ತಿದೆ. ಎಲ್ಲಿ ಹೋದ್ರು ನೀರು ಸಮುದ್ರ ಸೇರಬೇಕು, ಆ‌ ಸಮುದ್ರವೇ ಕಾಂಗ್ರೆಸ್ ಪಕ್ಷ.ಯಾವುದೇ ಹುದ್ದೆ ಆಕಾಂಕ್ಷೆ ಇಲ್ಲದೆ ಆಯನೂರು ಮಂಜುನಾಥ್ ನಮ್ಮ ಪಕ್ಷ ಸೇರ್ತಿದ್ದಾರೆ. ವ್ಯಕ್ತಿ, ಅರ್ಹತೆ ನೋಡಿ ಅಧಿಕಾರ ಕೊಡ್ತೀವಿ, ಹಿರಿಯರ ಜೊತೆ ಹೊಸಬರು ಕೆಲಸ ಮಾಡಿಕೊಂಡು ಹೋಗಬೇಕು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಇಡೀ ಜಗತ್ತು ಭಾರತದ ಕಡೆ ನೋಡ್ತಿದೆ