Select Your Language

Notifications

webdunia
webdunia
webdunia
webdunia

ಮುಖ್ಯಮಂತ್ರಿ ಆಗುವವರೆಗೂ ತಾಳ್ಮೆಯಿಂದ ಕಾಯುತ್ತೇನೆ : ಶ್ರೀರಾಮುಲು

ಮುಖ್ಯಮಂತ್ರಿ ಆಗುವವರೆಗೂ ತಾಳ್ಮೆಯಿಂದ ಕಾಯುತ್ತೇನೆ : ಶ್ರೀರಾಮುಲು
ಬಳ್ಳಾರಿ , ಶುಕ್ರವಾರ, 24 ಫೆಬ್ರವರಿ 2023 (10:16 IST)
ಬಳ್ಳಾರಿ : ಇಂದಲ್ಲ ನಾಳೆ ನಮ್ಮ ಪಕ್ಷ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತದೆ. ಅಲ್ಲಿಯವರೆಗೂ ನಾನು ತಾಳ್ಮೆಯಿಂದ ಕಾಯುತ್ತೇನೆ ಎಂದು ಸಾರಿಗೆ ಸಚಿವ ಶ್ರೀರಾಮುಲು, ಮುಖ್ಯಮಂತ್ರಿ ಕನಸು ಬಿಚ್ಚಿಟ್ಟಿದ್ದಾರೆ.
 
ಸಂಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಎಸ್.ಟಿ ಸಮುದಾಯದ ನಾಯಕನನ್ನು ಪಕ್ಷ ಈ ಮಟ್ಟಕ್ಕೆ ಬೆಳೆಸಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧಿಸಲು ಪಕ್ಷ ಅವಕಾಶ ಕೊಟ್ಟಿತ್ತು.

ಇಂದಲ್ಲ ನಾಳೆ ಪಕ್ಷ ನನ್ನ ಸಾಧನೆಯನ್ನು ಗುರುತಿಸುತ್ತದೆ. ನಾನು ಮೋದಿ, ಅಮಿತ್ ಶಾಗೆ ಯಾಕೆ ಮೆಚ್ಚುಗೆಯಾಗಬಾರದು? ನನಗೆ ಅತಿಯಾದ ತಾಳ್ಮೆಯಿದೆ ಮುಖ್ಯಮಂತ್ರಿಯಾಗುವವರೆಗೂ ನಾನು ಕಾಯುತ್ತೇನೆ ಎಂದು ಅವರು ಹೇಳಿದ್ದಾರೆ.

ಕಲ್ಯಾಣ ಕರ್ನಾಟಕದಲ್ಲಿ ಅತೀ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ನನಗೆ ಬಳ್ಳಾರಿ ಜಿಲ್ಲೆಯಿಂದಲೇ ಚುನಾವಣೆ ಎದುರಿಸಬೇಕು ಎಂಬ ಆಸೆ ಇದೆ. ಈ ಮೂಲಕ ಸಂಡೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಆಸೆಯನ್ನು ಪರೋಕ್ಷವಾಗಿ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

5 ಮತ್ತು 8 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆಯ ವೇಳಾಪಟ್ಟಿ ಪ್ರಕಟ