Select Your Language

Notifications

webdunia
webdunia
webdunia
Saturday, 5 April 2025
webdunia

ಯಡಿಯೂರಪ್ಪ, ಶ್ರೀರಾಮುಲು ಕಳಂಕಿತರಲ್ಲ : ನರೇಂದ್ರ ಮೋದಿ

ಎಫ್ಐಆರ್
ಬೆಂಗಳೂರು , ಶುಕ್ರವಾರ, 24 ಫೆಬ್ರವರಿ 2023 (08:54 IST)
ಬೆಂಗಳೂರು  : "ಶ್ರೀರಾಮುಲು ವಿರುದ್ಧ ಒಂದಾದರೂ ಆರೋಪ ಸಾಬೀತಾಗಿದೆಯಾ ಹೇಳಿ? ದಾಖಲೆ ನೋಡಿರಿ. ಯಡಿಯೂರಪ್ಪಜಿ ವಿರುದ್ಧ ದಾಖಲಿಸಲಾದ ಎಲ್ಲ ಎಫ್ಐಆರ್ಗಳನ್ನು ರದ್ದು ಮಾಡಲಾಗಿದೆ. ಇದರರ್ಥ ನಾನು ಯಾರಿಗೂ ಸರ್ಟಿಫಿಕೇಟ್ ಇಲ್ಲಿ ಕೊಡುತ್ತಿಲ್ಲ. ಆದರೆ ಇದು ಸತ್ಯ!"
 
ಹೀಗೆಂದು ಪ್ರತಿಕ್ರಿಯಿಸಿದವರು ಮತ್ತಾರೂ ಅಲ್ಲ, ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು. ಸಂದರ್ಶನದಲ್ಲಿ, ಕಳಂಕಿತರ ಪಟ್ಟ ಕಟ್ಟಿಕೊಂಡಿದ್ದರೂ ಬಿಜೆಪಿಗೆ ವಾಪಸ್ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರ ಸೇರ್ಪಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕರ್ನಾಟಕದುದ್ದಕ್ಕೂ ಮಾಡಿದ ಪ್ರಚಾರ ಸಭೆಗಳಲ್ಲಿ ಇವರಿಬ್ಬರ ಬಗ್ಗೆ ತುಟಿ ಬಿಚ್ಚದಿದ್ದ ನರೇಂದ್ರ ಮೋದಿ ಅವರು ಏ.15ರಂದು ಸಂಜೆ ಪ್ರಸಾರವಾದ ಸಂದರ್ಶನದಲ್ಲಿ ಇವರಿಬ್ಬರನ್ನು ಬೆಂಬಲಿಸಿ ಮಾತುಗಳನ್ನಾಡಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಯಡಿಯೂರಪ್ಪ ಸ್ಪರ್ಧಿಸುತ್ತಿರುವ ಶಿವಮೊಗ್ಗ ಮತ್ತು ಶ್ರೀರಾಮುಲು ಸ್ಪರ್ಧಿಸುತ್ತಿರುವ ಬಳ್ಳಾರಿಯಲ್ಲಿ ಮೋದಿ ಪ್ರಚಾರ ಸಭೆ ನಡೆಸಿರಲಿಲ್ಲ.  

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯ ಮಾರಾಟದಿಂದ ಚಿನ್ನದ ಬೆಳೆ ತೆಗೆದ ಸರ್ಕಾರ !