Select Your Language

Notifications

webdunia
webdunia
webdunia
webdunia

ಶೀಘ್ರದಲ್ಲೇ ದಸರಾ ಲೆಕ್ಕ ಕೊಡುತ್ತೇನೆ-ಸಚಿವ ಎಸ್.ಟಿ.ಸೋಮಶೇಖರ್

ಶೀಘ್ರದಲ್ಲೇ ದಸರಾ ಲೆಕ್ಕ ಕೊಡುತ್ತೇನೆ-ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು , ಶನಿವಾರ, 22 ಅಕ್ಟೋಬರ್ 2022 (15:49 IST)
ಮೈಸೂರು ದಸರಾ ಗೆ ಎಷ್ಟು ಖರ್ಚಾಗಿದೆ. ಈ ಬಗ್ಗೆ ಪೈಸೆ ಪೈಸೆ ಲೆಕ್ಕವನ್ನು ಕೊಡಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮುಂದಾಗಿದ್ದಾರೆ,. ಮೈಸೂರಿನಲ್ಲಿ ಮಾತನಾಡಿದ ಅವರು, 19 ಸಮಿತಿಯವರು ಲೆಕ್ಕ ಕೊಟ್ಟಿದ್ದಾರೆ. 2 ಉಪಸಮಿತಿಯವರು ಇನ್ನೂ ಲೆಕ್ಕ ಕೊಟ್ಟಿಲ್ಲ. ಅವರು ಲೆಕ್ಕ ಕೊಟ್ಟರೆ  ತಕ್ಷಣವೇ ಒಟ್ಟು ಖರ್ಚು ವೆಚ್ಚವನ್ನು ಜನತೆಯ ಮುಂದಿಡುತ್ತೇನೆ ಎಂದರು. ಮೈಸೂರಿನಲ್ಲಿ  ಪಾರಂಪರಿಕ ಕಟ್ಟಡಗಳು ಕುಸಿದ ವಿಚಾರದ ಬಗ್ಕುಗೆ ಮಾತ್ರ ಸೋಮಶೇಖರ್  ಹೆಚ್ಚು ಪ್ರತಿಕ್ರಯಿಸಲು ಇಷ್ಟಪಡಲಿಲ್ಲ.  ನಿರೀಕ್ಷೆಗೂ ಮೀರಿ ಮಳೆ ಸುರಿದಿದೆ. ಇದರಿಂದ ಪಾರಂಪರಿಕ ಕಟ್ಟಡಗಳಿಗೆ  ಹಾನಿಯಿಗುತ್ತಿರುವುದು ಗಮನಕ್ಕೆ ಬಂದಿದೆ. ಎಲ್ಲೆಲ್ಲಿ ಸಮಸ್ಯೆ ಆಗಿದೆ ಎಂದು ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ರು. ಇದೇ ವೇಳೆ ಜೆಡಿಎಸ್ ತೊರೆಯುವುದಿಲ್ಲವೆಂದು ಹೇಳಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡರ ಬಗ್ಗೆಯೂ ಸೋಮಶೇಖರ್ ಪ್ರತಿಕ್ರಯಿಸಿದ್ರು. J.T. ದೇವೇಗೌಡರ ನಡೆ ಮೀನಿನ ಹೆಜ್ಜೆ, ಎರಡನ್ನೂ ಕಂಡು ಹಿಡಿಯೋಕೆ ಆಗಲ್ಲ ಅಂತ ನಾನು ಮೊದಲೇ ಹೇಳಿದ್ದೆ ಎಂದು S.T.ಸೋಮಶೇಖರ್​​​ ವ್ಯಂಗ್ಯವಾಡಿದ್ರು. JTD ಜೆಡಿಎಸ್‌ನಲ್ಲೇ ಉಳಿದಿರುವುದು ವಿಶೇಷತೆ ಏನೂ ಇಲ್ಲ. ಬಿಜೆಪಿಯವರು ಅವರನ್ನು ಕರೆದಿರಲಿಲ್ಲ. ಕಾಂಗ್ರೆಸ್​​​ನವರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನಾನಂತೂ ಅವರನ್ನು ಸಂಪರ್ಕ ಮಾಡಿಲ್ಲ ಎಂದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್