Select Your Language

Notifications

webdunia
webdunia
webdunia
webdunia

ಆರು ಬಾರಿ ಟಿ20 ವಿಶ್ವಕಪ್ ಗೆದ್ದ ತಂಡಗಳು ಯಾವುವು? ಇಲ್ಲಿದೆ ಮಾಹಿತಿ

ಆರು ಬಾರಿ ಟಿ20 ವಿಶ್ವಕಪ್ ಗೆದ್ದ ತಂಡಗಳು ಯಾವುವು? ಇಲ್ಲಿದೆ ಮಾಹಿತಿ
ಮುಂಬೈ , ಶನಿವಾರ, 22 ಅಕ್ಟೋಬರ್ 2022 (08:50 IST)
Photo Courtesy: Twitter
ಮುಂಬೈ: ಏಳನೇ ಟಿ20 ವಿಶ್ವಕಪ್ ಗೆ ಈಗಾಗಲೇ ಚಾಲನೆ ಸಿಕ್ಕಿದೆ. ಇದುವರೆಗೆ ಆರು ಬಾರಿ ಟಿ20 ವಿಶ್ವಕಪ್ ನಡೆದಿದ್ದು ವಿಜೇತ ತಂಡಗಳ ಲಿಸ್ಟ್ ಇಲ್ಲಿದೆ.

2007 ರ ವಿಶ್ವಕಪ್: ಈ ವಿಶ್ವಕಪ್ ನಡೆದಿದ್ದ ದ.ಆಫ್ರಿಕಾದಲ್ಲಿ. ಫೈನಲ್ ನಲ್ಲಿ ಧೋನಿ ನೇತೃತ್ವದ ಯುವ ಪಡೆ ಚೊಚ್ಚಲ ಚಾಂಪಿಯನ್ ಶಿಪ್ ಗೆದ್ದುಕೊಂಡಿತ್ತು.
2009 ವಿಶ್ವಕಪ್:  ಈ ವಿಶ್ವಕಪ್ ನಡೆದಿದ್ದು ಇಂಗ್ಲೆಂಡ್ ನಲ್ಲಿ. ಶ್ರೀಲಂಕಾ ಸೋಲಿಸಿ ಚಾಂಪಿಯನ್ ಆಗಿದ್ದ ಪಾಕಿಸ್ತಾನ ತಂಡ.
2010 ರ ವಿಶ್ವಕಪ್: ವೆಸ್ಟ್ ಇಂಡೀಸ್ ನಲ್ಲಿ ನಡೆದಿದ್ದ ಈ ವಿಶ್ವಕಪ್ ಗೆದ್ದಿದ್ದು ಇಂಗ್ಲೆಂಡ್ ತಂಡ. ಆಸ್ಟ್ರೇಲಿಯಾ ರನ್ನರ್ ಅಪ್ ಆಗಿತ್ತು.
2012 ರ ವಿಶ್ವಕಪ್: ಈ ವಿಶ್ವಕಪ್ ನಡೆದಿದ್ದು ಶ್ರೀಲಂಕಾದಲ್ಲಿ. ಫೈನಲ್ ನಲ್ಲಿ ಲಂಕಾ ಸೋಲಿಸಿದ ವೆಸ್ಟ್ ಇಂಡೀಸ್ ಗೆಲುವು ಕಂಡಿತ್ತು.
2014 ರ ವಿಶ್ವಕಪ್: ಬಾಂಗ್ಲಾದೇಶದಲ್ಲಿ ನಡೆದ ಈ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸೋಲಿಸಿ ಶ್ರೀಲಂಕಾ ವಿಜೇತವಾಯಿತು.
2016 ರ ವಿಶ್ವಕಪ್: ಈ ವಿಶ್ವಕಪ್ ನಡೆದಿದ್ದು ಭಾರತದಲ್ಲಿ. ಇಂಗ್ಲೆಂಡ್ ಸೋಲಿಸಿದ ವೆಸ್ಟ್ ಇಂಡೀಸ್ ಎರಡನೇ ಬಾರಿಗೆ ಚಾಂಪಿಯನ್ ಆಗಿತ್ತು.
2021 ರ ವಿಶ್ವಕಪ್: ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ಯುಎಇನಲ್ಲಿ ನಡೆದಿದ್ದ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ಗೆಲುವು ಕಂಡಿತ್ತು.


-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಕ್ಟೀಸ್ ಮಾಡುವಾಗ ತೊಂದರೆ ಕೊಡುತ್ತಿದ್ದ ಅಭಿಮಾನಿಗೆ ಕೊಹ್ಲಿ ವಾರ್ನಿಂಗ್