ನವದೆಹಲಿ: 2023 ರ ಏಷ್ಯಾ ಕಪ್ ಪಾಕಿಸ್ತಾನದಲ್ಲಿ ನಡೆದರೆ ಟೀಂ ಇಂಡಿಯಾ ಆ ದೇಶಕ್ಕೆ ಪ್ರಯಾಣ ಬೆಳೆಸದು ಎಂಬ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆ ಪಾಕ್ ಕೆಂಗಣ್ಣಿಗೆ ಗುರಿಯಾಗಿತ್ತು.
ಹಾಗೊಂದು ವೇಳೆ ಭಾರತ ನಮ್ಮ ದೇಶಕ್ಕೆ ಬರದೇ ಹೋದರೂ ನಾವೂ ನಮ್ಮ ತಂಡವನ್ನು 2023 ರ ಏಕದಿನ ವಿಶ್ವಕಪ್ ಗೆ ಭಾರತಕ್ಕೆ ಕಳುಹಿಸಲ್ಲ ಎಂದು ಪಿಸಿಬಿ ಸಂದೇಶ ರವಾನಿಸಿತ್ತು.
ಇದರ ಬೆನ್ನಲ್ಲೇ ಈ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿಕೆ ನೀಡಿದ್ದು, ಇದು ಬಿಸಿಸಿಐ ವಿಚಾರವಾಗಿದ್ದು, ಅವರೇ ಈ ಬಗ್ಗೆ ಹೇಳಿಕೆ ನೀಡುತ್ತಾರೆ. 2023 ರ ಏಕದಿನ ವಿಶ್ವಕಪ್ ಭಾರತದಲ್ಲಿಯೇ ಅದ್ಧೂರಿಯಾಗಿ ನಡೆಯಲಿದೆ. ಪಾಕಿಸ್ತಾನವೂ ಪಾಲ್ಗೊಳ್ಳಲಿದೆ. ಎಲ್ಲಾ ತಂಡಗಳಿಗೆ ಸ್ವಾಗತ. ಕ್ರಿಕೆಟ್ ಕ್ಷೇತ್ರಕ್ಕೆ ಭಾರತದ ಕೊಡುಗೆ ದೊಡ್ಡದು ಎಂದಿದ್ದಾರೆ.
-Edited by Rajesh Patil