Publish Date: Wed, 19 Oct 2022 (15:51 IST)
Updated Date: Wed, 19 Oct 2022 (15:54 IST)
ಬ್ರಿಸ್ಬೇನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಬೇಕಿದ್ದ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ ಮಳೆಗೆ ಆಹುತಿಯಾಗಿದೆ.
ಭಾರತೀಯ ಕಾಲಮಾನ ಪ್ರಕಾರ ಇಂದು ಮಧ್ಯಾಹ್ನ 1.30 ಕ್ಕೆ ಪಂದ್ಯ ಆರಂಭವಾಗಬೇಕಿತ್ತು. ಆದರೆ ಬ್ರಿಸ್ಬೇನ್ ಮೈದಾನದಲ್ಲಿ ನಿರಂತರ ಮಳೆ ಸುರಿಯುತ್ತಿದ್ದುದ್ದರಿಂದ ಟಾಸ್ ಕೂಡಾ ಮಾಡಲಾಗಲಿಲ್ಲ.
ಕೊನೆಗೆ ಒಂದೂ ಎಸೆತ ಕಾಣದೇ ಪಂದ್ಯ ರದ್ದು ಮಾಡಬೇಕಾಯಿತು. ಇನ್ನು ಭಾರತ ಟಿ20 ವಿಶ್ವಕಪ್ ಕೂಟದ ಮೊದಲ ಪಂದ್ಯವನ್ನು ಭಾನುವಾರ ಪಾಕಿಸ್ತಾನ ವಿರುದ್ಧ ಆಡಲಿದೆ.
-Edited by Rajesh Patil