ಮುಂಬೈ: 2023 ರ ಏಷ್ಯಾ ಕಪ್ ಪಾಕಿಸ್ತಾನದಲ್ಲಿ ನಡೆದರೆ ಟೀಂ ಇಂಡಿಯಾ ಕಳುಹಿಸಲ್ಲ. ಏಷ್ಯಾ ಕಪ್ ತಟಸ್ಥ ಸ್ಥಳದಲ್ಲಿ ನಡೆಯಲಿದೆ ಎಂಬ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆಗೆ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಕಿಡಿ ಕಾರಿದ್ದಾರೆ.
2023 ರ ಏಷ್ಯಾ ಕಪ್ ಆತಿಥ್ಯ ಪಾಕಿಸ್ತಾನ ವಹಿಸುತ್ತಿದೆ. ಹಾಗಿದ್ದರೂ ಟೂರ್ನಮೆಂಟ್ ಪಾಕಿಸ್ತಾನದಲ್ಲಿ ನಡೆಯಲ್ಲ. ಬದಲಾಗಿ ತಟಸ್ಥ ಸ್ಥಳದಲ್ಲಿ ನಡೆಯಲಿದೆ ಎಂದು ಜಯ್ ಶಾ ಹೇಳಿದ್ದರು.
ಈ ಹೇಳಿಕೆ ಪಾಕ್ ಕೆಂಗಣ್ಣಿಗೆ ಗುರಿಯಾಗಿದೆ. ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಟ್ವೀಟ್ ಮಾಡಿ ಕಿಡಿ ಕಾರಿದ್ದಾರೆ. ಕಳೆದ 12 ತಿಂಗಳಿನಿಂದ ಎರಡೂ ದೇಶಗಳ ಕ್ರಿಕೆಟಿಗರ ನಡುವೆ ಸ್ನೇಹ ಸಂಬಂಧ ವೃದ್ಧಿಯಾಗಿರುವಾಗ ಟಿ20 ವಿಶ್ವಕಪ್ ಮುಂದೆ ಇಟ್ಟುಕೊಂಡು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇಂಥಾ ಹೇಳಿಕೆ ನೀಡುತ್ತಿರುವ ಉದ್ದೇಶವೇನು? ಭಾರತೀಯ ಕ್ರಿಕೆಟ್ ನಲ್ಲಿ ಆಡಳಿತದ ಅನುಭವದ ಕೊರತೆ ಇದರಲ್ಲಿ ಎದ್ದು ಕಾಣುತ್ತಿದೆ ಎಂದಿದ್ದಾರೆ ಅಫ್ರಿದಿ.
-Edited by Rajesh Patil