Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್ ನಲ್ಲಿ ಆಟಗಾರರಿಗೆ ಕೊರೋನಾ ಬಂದರೆ ಏನಾಗುತ್ತದೆ?

ಟಿ20 ವಿಶ್ವಕಪ್ ನಲ್ಲಿ ಆಟಗಾರರಿಗೆ ಕೊರೋನಾ ಬಂದರೆ ಏನಾಗುತ್ತದೆ?
ಬ್ರಿಸ್ಬೇನ್ , ಮಂಗಳವಾರ, 18 ಅಕ್ಟೋಬರ್ 2022 (08:50 IST)
ಬ್ರಿಸ್ಬೇನ್: ಟಿ20 ವಿಶ್ವಕಪ್ ನಲ್ಲಿ ಆಟಗಾರರಿಗೆ ಕೊರೋನಾ ಬಂದರೆ ಆಗ ಪಂದ್ಯದ ಮೇಲೆ ಪರಿಣಾಮ ಬೀರುತ್ತದಾ? ಇದಕ್ಕೆ ಇಲ್ಲಿದೆ ಉತ್ತರ.

ಕಳೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಅಳವಡಿಸಿದ್ದ ನಿಯಮವೇ ಇಲ್ಲೂ ಅನ್ವಯವಾಗಲಿದೆ. ಟಿ20 ವಿಶ್ವಕಪ್ ನಲ್ಲಿ ಆಟಗಾರರಿಗೆ ಕೊರೋನಾ ಬಂದರೆ ಮೊದಲಿನಂತೆ ಐಸೋಲೇಷನ್, ಆಟದಿಂದ ಹೊರಗುಳಿಯಬೇಕಾಗಿಲ್ಲ.

ಕೊರೋನಾ ಬಂದ ಆಟಗಾರನ್ನು ತಂಡದ ವೈದ್ಯರೇ ಪರಿಶೀಲಿಸಲಿದ್ದಾರೆ. ಒಂದು ವೇಳೆ ಆಟಗಾರನಿಗೆ ಯಾವುದೇ ಸಮಸ್ಯೆಯಿಲ್ಲದಿದ್ದರೆ ಪಾಸಿಟಿವ್ ಇದ್ದರೂ ಪಂದ್ಯವಾಡಬಹುದಾಗಿದೆ. ಅಗತ್ಯ ಬಂದಲ್ಲಿ ಮಾತ್ರ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ಹೀಗಾಗಿ ಈ ಬಾರಿ ಕೊರೋನಾ ಪಂದ್ಯದ ಮೇಲೆ ಪರಿಣಾಮ ಬೀರಲ್ಲ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಈ ವಿಶ್ವಕಪ್ ಗೇ ನಿವೃತ್ತಿಯಾಗಲ್ಲ ವಿರಾಟ್ ಕೊಹ್ಲಿ!