Publish Date: Tue, 18 Oct 2022 (08:10 IST)
Updated Date: Tue, 18 Oct 2022 (08:57 IST)
ಮುಂಬೈ: ಈ ಬಾರಿ ಟಿ20 ವಿಶ್ವಕಪ್ ಆದ ಮೇಲೆ ವಿರಾಟ್ ಕೊಹ್ಲಿ ಕಿರು ಮಾದರಿಯ ಕ್ರಿಕೆಟ್ ನಿಂದ ದೂರವಾಗಬಹುದು ಎಂಬ ಅನುಮಾನಗಳನ್ನು ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ತಳ್ಳಿ ಹಾಕಿದ್ದಾರೆ.
ಈ ವಿಶ್ವಕಪ್ ಮುಗಿದ ಬಳಿಕ ಕೊಹ್ಲಿ ಟಿ20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸಬಹುದು ಎಂಬ ರೂಮರ್ ಗಳ ಬಗ್ಗೆ ರಾಜ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಕೊಹ್ಲಿ ಈಗಲೇ ನಿವೃತ್ತಿಯಾಗಲ್ಲ. ಅವರು ಮುಂದಿನ ಟಿ20 ವಿಶ್ವಕಪ್ ನ್ನೂ ಆಡಲಿದ್ದಾರೆ ಎಂದು ರಾಜ್ ಕುಮಾರ್ ಹೇಳಿಕೆ ನೀಡಿದ್ದಾರೆ. ಇದು ಕೊಹ್ಲಿ ಅಭಿಮಾನಿಗಳು ಸಮಾಧಾನದ ನಿಟ್ಟುಸಿರುವ ಬಿಡುವಂತೆ ಮಾಡಿದೆ.
-Edited by Rajesh Patil