Select Your Language

Notifications

webdunia
webdunia
webdunia
webdunia

ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್

ಟಿ20 ವಿಶ್ವಕಪ್
ಬ್ರಿಸ್ಬೇನ್ , ಸೋಮವಾರ, 17 ಅಕ್ಟೋಬರ್ 2022 (10:15 IST)
ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಆರಂಭ ಪಡೆದಿದೆ.

ಆರಂಭಿಕ ಕೆಎಲ್ ರಾಹುಲ್ ಭರ್ಜರಿ ಓಪನಿಂಗ್ ನೀಡಿದ್ದಾರೆ. ಕೇವಲ 33 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 57 ರನ್ ಸಿಡಿಸಿದರು. ವಿಶೇಷವೆಂದರೆ ಇನ್ನೊಂದು ತುದಿಯಲ್ಲಿದ್ದ ರೋಹಿತ್ ಗೆ ಹೆಚ್ಚು ಬ್ಯಾಟಿಂಗ್ ಗೆ ಅವಕಾಶವೇ ಸಿಗಲಿಲ್ಲ. ಅವರು ಕೇವಲ 14 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರು.

ಇತ್ತೀಚೆಗಿನ ವರದಿ ಬಂದಾಗ ಟೀಂ ಇಂಡಿಯಾ 10 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿದೆ. ಕೊಹ್ಲಿ 6, ಸೂರ್ಯಕುಮಾರ್ಯಾದವ್ 5 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.


-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್: ಟೀಂ ಇಂಡಿಯಾ-ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ ಶುರು