Select Your Language

Notifications

webdunia
webdunia
webdunia
webdunia

ಭಾರತ-ನ್ಯೂಜಿಲೆಂಡ್ ನಡುವೆ ಇಂದು ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ

ಭಾರತ-ನ್ಯೂಜಿಲೆಂಡ್ ನಡುವೆ ಇಂದು ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ
ಬ್ರಿಸ್ಬೇನ್ , ಬುಧವಾರ, 19 ಅಕ್ಟೋಬರ್ 2022 (08:10 IST)
ಬ್ರಿಸ್ಬೇನ್: ಟಿ20 ವಿಶ್ವಕಪ್ ಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಅಭ್ಯಾಸ ಪಂದ್ಯಗಳ ಪೈಕಿ ಟೀಂ ಇಂಡಿಯಾ ಇಂದು ಕೊನೆಯ ಪಂದ್ಯವಾಡಲಿದೆ.

ಇಂದು ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯವಾಡುತ್ತಿದೆ. ಕಳೆದ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾವನ್ನು ಭಾರತ ರೋಚಕವಾಗಿ ಮಣಿಸಿತ್ತು.

ಇಂದಿನ ಪಂದ್ಯದಲ್ಲಿ ಸೋಲು-ಗೆಲುವಿಗಿಂತ ಪಾಕ್ ವಿರುದ್ಧದ ಪಂದ್ಯಕ್ಕೆ ಮೊದಲು ಭಾರತಕ್ಕೆ ಸಿದ್ಧತೆ ನಡೆಸಲು ವೇದಿಕೆ ಸಿಕ್ಕಂತಾಗುತ್ತದೆ. ಈ ಅಭ್ಯಾಸ ಪಂದ್ಯದಲ್ಲಿ ಪ್ರಮುಖರಿಗೆ ವಿಶ್ರಾಂತಿ ಸಿಗುವ ಸಾಧ‍್ಯತೆಯಿದೆ. ಆದರೆ ಕಳೆದ ಪಂದ್ಯವನ್ನು ಹಾರ್ದಿಕ್ ಪಾಂಡ್ಯ ಆಡಿರಲಿಲ್ಲ. ಹೀಗಾಗಿ ಅವರು ಇಂದು ಆಡಿದರೂ ಅಚ್ಚರಿಯಿಲ್ಲ.  ಈ ಪಂದ್ಯ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ವರ್ಷ ಟೀಂ ಇಂಡಿಯಾ ಪಾಕ್ ಪ್ರವಾಸದ ಬಗ್ಗೆ ಸ್ಪಷ್ಟನೆ ಕೊಟ್ಟ ಜಯ್ ಶಾ