ಮೆಲ್ಬೋರ್ನ್: ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯವಾಡಲು ಟೀಂ ಇಂಡಿಯಾ ಸಿದ್ಧತೆ ನಡೆಸುತ್ತಿದೆ.
ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಉಭಯ ತಂಡಗಳ ಆಟಗಾರರು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಭಾರತಕ್ಕೆ ಪಾಕಿಸ್ತಾನದ ಪ್ರಮುಖ ವೇಗಿ ಶಾಹಿನ್ ಅಫ್ರಿದಿಯನ್ನು ಎದುರಿಸುವುದು ಸವಾಲಾಗಿದೆ.
ಹೀಗಾಗಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ನೆಟ್ಸ್ ನಲ್ಲಿ ಹೆಚ್ಚು ಹೊತ್ತು ಕಾಲ ಕಳೆದಿದ್ದಾರೆ. ರೋಹಿತ್ ಎಡಗೈ ವೇಗಿಗಳಿಗೆ ಬೇಗನೇ ವಿಕೆಟ್ ಒಪ್ಪಿಸುತ್ತಾರೆ. ಹೀಗಾಗಿ ಶಾಹಿನ್ ಅಫ್ರಿದಿಯನ್ನು ಎದುರಿಸಲು ರೋಹಿತ್ ಎಡಗೈ ವೇಗಿಗಳನ್ನೇ ಬಳಸಿ ಅಭ್ಯಾಸ ನಡೆಸಿದ್ದಾರೆ.
-Edited by Rajesh Patil