Publish Date: Sat, 22 Oct 2022 (08:40 IST)
Updated Date: Sat, 22 Oct 2022 (09:25 IST)
ಮೆಲ್ಬೋರ್ನ್: ಟೀಂ ಇಂಡಿಯಾ ಕ್ರಿಕೆಟಿಗರು ಅದರಲ್ಲೂ ವಿಶೇಷವಾಗಿ ಕೊಹ್ಲಿಯಂತಹ ಸ್ಟಾರ್ ಬ್ಯಾಟಿಗರು ನೆಟ್ ಪ್ರಾಕ್ಟೀಸ್ ಮಾಡುವುದನ್ನು ನೋಡಲೆಂದೇ ಅಭಿಮಾನಿಗಳು ಮೈದಾನಕ್ಕೆ ಬರುತ್ತಾರೆ.
ಇದೇ ರೀತಿ ಟಿ20 ವಿಶ್ವಕಪ್ ನ ಮೊದಲ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರನ್ನು ವೀಕ್ಷಿಸಲು ಅಭಿಮಾನಿಗಳು ಮೆಲ್ಬೋರ್ನ್ ಮೈದಾನದತ್ತ ಬಂದಿದ್ದಾರೆ.
ಕೊಹ್ಲಿ ಬ್ಯಾಟಿಂಗ ಅಭ್ಯಾಸ ನಡೆಸುತ್ತಿದ್ದಾಗ ಅಭಿಮಾನಿ ಗುಂಪೊಂದು ಸಿಕ್ಸರ್ ಬಾರಿಸಲು ಕೂಗಿ ಹೇಳುತ್ತಿದ್ದರು. ಅವರತ್ತ ತಿರುಗಿದ ಕೊಹ್ಲಿ ಅಭ್ಯಾಸ ಮಾಡುವಾಗ ಕಿರುಚಾಡಬೇಡಿ. ಗಮನ ಕೇಂದ್ರೀಕರಿಸಲು ತೊಂದರೆಯಾಗುತ್ತದೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಹಾಗಿದ್ದರೂ ಆ ಅಭಿಮಾನಿ ನೀವು ರಿಲ್ಯಾಕ್ಸ್ ಆದಾಗ ಹೇಳಿ. ನಿಮಗೆ ನಾವು ಹೇಳಿಯೇ ಹೇಳುತ್ತೇವೆ. ಕಿಂಗ್ ನೀವು ಎಂದು ಹೇಳಿದ್ದಾರೆ.
-Edited by Rajesh Patil