Select Your Language

Notifications

webdunia
webdunia
webdunia
webdunia

ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ತಿದ್ದಲು ಇಂದಿನಿಂದಲೇ ಅವಕಾಶ: ಸರಿಪಡಿಸುವುದು ಹೇಗೆ ಇಲ್ಲಿದೆ ಡೀಟೈಲ್ಸ್

Ration card

Krishnaveni K

ಬೆಂಗಳೂರು , ಸೋಮವಾರ, 25 ನವೆಂಬರ್ 2024 (10:38 IST)
ಬೆಂಗಳೂರು: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಮುಂದಾಗಿದ್ದರಿಂದ ಹಲವರು ಅರ್ಹರೂ ಬಿಪಿಎಲ್ ಕಾರ್ಡ್ ಕಳೆದುಕೊಂಡಿದ್ದಾರೆ. ಇದೀಗ ಆ ಎಡವಟ್ಟು ಸರಿಪಡಿಸಲು ಸರ್ಕಾರ ಮುಂದಾಗಿದ್ದು ಇಂದಿನಿಂದ ಆ ಕೆಲಸ ಶುರುವಾಗಲಿದೆ.

 
ಇಂದಿನಿಂದ ರದ್ದಾಗಿರುವ ಬಿಪಿಎಲ್ ಕಾರ್ಡ್ ಮರುಪರಿಶೀಲಿಸಿ ಅನರ್ಹರಿಗೆ ಕತ್ತರಿ ಹಾಕಿ, ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್ ವಿತರಿಸಲಾಗುತ್ತದೆ. ಮುಖ್ಯಮಂತ್ರಿಗಳ ಸೂಚನೆ ಬೆನ್ನಲ್ಲೇ ಆಹಾರ ಇಲಾಖೆ ರದ್ದಾಗಿರುವ ಅರ್ಹರಿಗೆ ಮತ್ತೆ ವಿತರಿಸಲು ಮುಂದಾಗಿದೆ.

ತಿದ್ದುಪಡಿ ಮಾಡುವುದು ಎಲ್ಲಿ?
ಒಂದು ವೇಳೆ ನೀವು ಅರ್ಹರಾಗಿದ್ದೂ ಬಿಪಿಎಲ್ ಕಾರ್ಡ್ ರದ್ದಾಗಿದ್ದಲ್ಲಿ ಸಮೀಪದ ಆಹಾರ ಇಲಾಖೆ ಕೇಂದ್ರಕ್ಕೆ ತೆರಳಿ ಸರಿಪಡಿಸಬೇಕು. ಬೆಂಗಳೂರಿನಲ್ಲಿ ಪೂರ್ವ ವಲಯದವರಿಗೆ ರಾಜಾಜಿನಗರ, ಪಶ್ಚಿಮ ವಲಯಕ್ಕೆ ಬಸವನಗುಡಿ, ಉತ್ತರ ವಲಯ ಮೆಜೆಸ್ಟಿಕ್, ಕೆಂಗೇರಿ ಮತ್ತು ಬನಶಂಕರಿ, ಆರ್ ಟಿ ನಗರ ಆಹಾರ ಇಲಾಖೆ ಕಚೇರಿ,ವಯ್ಯಾಲಿಕಾವಲ್ ಮತ್ತು ಯಲಹಂಕ ಆಹಾರ ಇಲಾಖೆ ಕಚೇರಿಯಲ್ಲಿ ಸರಿಪಡಿಸಲಾಗುತ್ತದೆ.

ಯಾವೆಲ್ಲಾ ದಾಖಲೆ ಬೇಕು?
ಆಧಾರ್ ಕಾರ್ಡ್
ರೇಷನ್ ಕಾರ್ಡ್
ಐಟಿ ರಶೀದಿ

ಒಂದು ವೇಳೆ ನಿಮ್ಮ ಆದಾಯ ಮಿತಿ ಹೆಚ್ಚಿದ್ದರೆ ಬಿಪಿಎಲ್ ಕಾರ್ಡ್ ರದ್ದತಿ ಮುಂದುವರಿಯಲಿದೆ. ಇಲ್ಲದೇ ಹೋದರೆ ಮರಳಿ ಬಿಪಿಎಲ್ ಕಾರ್ಡ್ ಸಿಗಲಿದೆ. ಪ್ರತಿಯೊಬ್ಬರ ಕಾರ್ಡ್ ಪರಿಶೀಲನೆ ನಡೆಸಿ ಬಿಪಿಎಲ್ ಗೆ ಅರ್ಹರೋ, ಅನರ್ಹರೋ ಎಂದು ತೀರ್ಮಾನಿಸಲಾಗುತ್ತದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆ ಗೆಲುವಿನ ಬಲ: ಮುಸ್ಲಿಮರಿಗೆ ಮೀಸಲಾತಿ ಕೊಟ್ಟರೆ ತಪ್ಪೇನು ಎಂದ ಸಿಎಂ ಸಿದ್ದರಾಮಯ್ಯ