Select Your Language

Notifications

webdunia
webdunia
webdunia
webdunia

ಬಿಪಿಎಲ್ ಕಾರ್ಡ್ ರದ್ದಾದವರಿಗೆ ಕೆಎಚ್ ಮುನಿಯಪ್ಪ ಗುಡ್ ನ್ಯೂಸ್

KH Muniyappa

Krishnaveni K

ಬೆಂಗಳೂರು , ಗುರುವಾರ, 21 ನವೆಂಬರ್ 2024 (13:55 IST)
ಬೆಂಗಳೂರು: ಬಿಪಿಎಲ್ ಕಾರ್ಡ್ ರದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಜನರಿಗೆ ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಗುಡ್ ನ್ಯೂಸ್ ನೀಡಿದ್ದಾರೆ.

ರಾಜ್ಯ ಸರ್ಕಾರ ಇತ್ತೀಚೆಗೆ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಮುಂದಾಗಿತ್ತು. ತೆರಿಗೆ ಕಟ್ಟುವವರಿಗೆ ಸರ್ಕಾರೀ ನೌಕರಿಯಲ್ಲಿದ್ದವರ ಬಳಿ ಬಿಪಿಎಲ್ ಕಾರ್ಡ್ ಇದೆ ಎಂಬ ಕಾರಣಕ್ಕೆ ಪರಿಷ್ಕರಣೆ ಮಾಡಲು ಮುಂದಾಗಿತ್ತು. ಆದರೆ ಇದರಿಂದಾಗಿ ಎಷ್ಟೋ ಜನರ ಬಿಪಿಎಲ್ ಕಾರ್ಡ್ ರಾತ್ರೋರಾತ್ರಿ ಎಪಿಎಲ್ ಆಗಿತ್ತು.

ಇದರಲ್ಲಿ ಕೆಲವು ಬಡವರ ಕಾರ್ಡ್ ಗಳೂ ರದ್ದಾಗಿದ್ದವು. ಇದರಿಂದ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ತಕ್ಷಣವೇ ಬಡವರ ಕಾರ್ಡ್ ರದ್ದಾಗಿದ್ದರೆ ಸರಿಪಡಿಸಿ ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಆಗಿ ಸೂಚನೆ ನೀಡಿದ್ದರು. ಅದರಂತೆ ಇಂದು ಕೆಎಚ್ ಮುನಿಯಪ್ಪ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ಪತ್ರಿಕಾಗೋಷ್ಠಿ ನಡೆಸಿದರು.

ಈ ವೇಳೆ ಮಾತನಾಡಿದ ಅವರು ರೇಷನ್ ಕಾರ್ಡ್ ಗೊಂದಲಗಳಿಗೆ ನಾನೇ ಕಾರಣ, ಅಧಿಕಾರಿಗಳಲ್ಲ. ತೆರಿಗೆ ಕಟ್ಟುವವರು ಮತ್ತು ಸರ್ಕಾರಿ ನೌಕರಿಯಲ್ಲಿದ್ದವರ ಕಾರ್ಡ್ ರದ್ದು ಮಾಡಲಾಗುತ್ತಿದೆ. ಆದರೆ ಅರ್ಹರಿದ್ದರೂ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಅವರಿಗೆ ಅದೇ ಐಡಿಯಲ್ಲಿ ಬಿಪಿಎಲ್ ಕಾರ್ಡ್ ಕೊಡಲಾಗುವುದು. ಏಳು ದಿನಗಳೊಳಗಾಗಿ ಬಿಪಿಎಲ್ ಕಾರ್ಡ್ ರದ್ದಾದ ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್ ನೀಡುತ್ತೇವೆ. ಈ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಮಲಾ ಸೀತಾರಾಮನ್ ಎದುರು ನಬಾರ್ಡ್ ಸಾಲದ ಪಟ್ಟಿ ನೀಡಿದ ಸಿಎಂ ಸಿದ್ದರಾಮಯ್ಯ