Select Your Language

Notifications

webdunia
webdunia
webdunia
webdunia

ಅರ್ಹತೆಯಿದ್ದರೂ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಏನು ಮಾಡಬೇಕು: ಕೆಎಚ್ ಮುನಿಯಪ್ಪ ಪರಿಹಾರ

KH Muniyappa

Krishnaveni K

ಬೆಂಗಳೂರು , ಬುಧವಾರ, 20 ನವೆಂಬರ್ 2024 (11:11 IST)
ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಶುರುವಾಗಿದೆ. ಕೆಲವೊಂದು ಕುಟುಂಬದವರು ಅರ್ಹತೆಯಿದ್ದರೂ ನಮ್ಮ  ಬಿಪಿಎಲ್ ಕಾರ್ಡ್ ರದ್ದಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಅಂತಹವರಿಗೆ ಈಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಪರಿಹಾರ ಸೂಚಿಸಿದ್ದಾರೆ.

ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಮುಂದಾಗಿರುವುದರಿಂದ ಎಷ್ಟೋ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಪೈಕಿ ಕೆಲವರು ರೈತರು ಇನ್ನು ಕೆಲವರು ಗಾರ್ಮೆಂಟ್ ನೌಕರರೂ ಸೇರಿದ್ದಾರೆ. ಸರ್ಕಾರದ ಮಾನದಂಡಗಳಿಗೆ ಅನ್ವಯ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತಿದೆ.

ಆದರೆ ಕೆಲವರಿಗೆ ಹೇಳಿಕೊಳ್ಳಲು ಮಾತ್ರ ನೌಕರಿ, ಜಮೀನು ಇದೆ. ಆದರೆ ಅದಕ್ಕೆ ಆದಾಯ ಇಲ್ಲ. ಹೀಗಾಗಿ ಬಿಪಿಎಲ್ ಕಾರ್ಡ್ ಎಷ್ಟೋ ಸಹಾಯವಾಗುತ್ತಿತ್ತು. ಆದರೆ ಈಗ ಸರ್ಕಾರ ಏಕಾಏಕಿ ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದರಿಂದ ಸರ್ಕಾರದ ಉಚಿತ ಸೌಲಭ್ಯಗಳು ಸಿಗದಂತಾಗಿದೆ.

ಕೆಲವರು ಅರ್ಹತೆಯಿದ್ದರೂ ಅಧಿಕಾರಿಗಳ ಎಡವಟ್ಟಿನಿಂದ ಬಿಪಿಎಲ್ ಕಾರ್ಡ್ ಕಳೆದುಕೊಂಡಿದ್ದಾರೆ. ಇಂತಹವರಿಗೆ ಸಚಿವ ಕೆಎಚ್ ಮುನಿಯಪ್ಪ ಅಭಯ ನೀಡಿದ್ದಾರೆ. ಯಾರಿಗಾದರೂ ಬಡವರಿಗೂ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಅದನ್ನು ಅಧಿಕಾರಿಗಳ ಗಮನಕ್ಕೆ ತಂದರೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತವನ್ನು ಹಿಂದೂ ರಾಷ್ಟ್ರವಾಗಲು ಬಿಡಬಾರದು, ಅಲ್ಪಸಂಖ್ಯಾತರ ಅಭಿವೃದ್ಧಿ ಗುರಿ: ಯತೀಂದ್ರ ಸಿದ್ದರಾಮಯ್ಯ