Publish Date: Wed, 20 Feb 2019 (15:47 IST)
Updated Date: Wed, 20 Feb 2019 (15:55 IST)
ಬೃಹತ್ ಆಲದ ಮರವೊಂದರಲ್ಲಿ ಕೂಲಿ ಕಾರ್ಮಿಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಸಾಲದ ಬಾಧೆಗೆ ಬೇಸತ್ತು ಕೂಲಿ ಕಾರ್ಮಿಕ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ದಾವಣಗೆರೆ ನಗರದ ಎಪಿಎಂಸಿ ಆವರಣದಲ್ಲಿ ಈ ದುರ್ಘಟನೆ ನಡೆದಿದೆ. ಉಸ್ಮಾನ್ ಸಾಬ್ (25) ನೇಣಿಗೆ ಶರಣಾದ ಕಾರ್ಮಿಕನಾಗಿದ್ದಾನೆ. ಎಪಿಎಂಸಿ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಉಸ್ಮಾನ್ ಸಾಬ್, ದಾವಣಗೆರೆ ನಗರದ ಭಾಷಾನಗರದ ನಿವಾಸಿಯಾಗಿದ್ದು, ದಲ್ಲಾಳಿ ಮಂಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ಕೆಲ ಕಡೆ ಸಾಲ ಮಾಡಿದ್ದ. ಇದಕ್ಕಾಗಿ ತಮ್ಮನಿಗೆ ದುಡ್ಡು ಕೇಳುತ್ತಿದ್ದ. ಸಾಲ ತೀರಿಸಲು ಆಗದೆ, ಬೇಸತ್ತು ನೇಣಿಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಆರ್ ಎಂ ಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.