Publish Date: Tue, 19 Feb 2019 (20:14 IST)
Updated Date: Tue, 19 Feb 2019 (20:15 IST)
ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ಬೈಕ್ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಿಟ್ ಆಂಡ್ ರನ್ ನಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿಯ ಗಂಗೊಳ್ಳಿಯಲ್ಲಿ ನಡೆದಿದೆ. ಮೃತರನ್ನು ಗಂಗೊಳ್ಳಿ ಬಾವಿಕಟ್ಟೆ ನಿವಾಸಿ ವಿಖ್ಯಾತ್(23) ಎಂದು ಗುರುತಿಸಲಾಗಿದೆ.
ವಿಖ್ಯಾತ್ ಕುಂದಾಪುರದ ಹೊಟೇಲ್ ಒಂದರಲ್ಲಿ ಕೆಲಸಕ್ಕಿದ್ದು ತಡರಾತ್ರಿ ಕೆಲಸ ಮುಗಿಸಿ ವಾಪಾಸಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಈ ಬಗ್ಗೆ ಮಾಹಿತಿ ಪಡೆದ ಗಂಗೊಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.