Daily Horoscope

Select Your Language

Notifications

webdunia
webdunia
webdunia
webdunia

ಸೆಡ್ಡುಹೊಡೆದ ಭಾರತೀಯ ಸೇನೆ ಮಾಡಿದ್ದೇನು?

ಜಮ್ಮು – ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ಸಿಆರ್‌ಪಿಎಫ್ ಯೋಧರ ಬಲಿಗೆ ಮಾಸ್ಟರ್ ಮೈಂಡ್ ರೂಪಿಸಿದ್ದವ ಭಾರತೀಯ ಯೋಧರ ಗುಂಡಿಗೆ ಬಲಿಯಾಗಿದ್ದಾನೆ.

ಜೈಷ್ ಎ ಮಹಮದ್ ಸಂಘಟನೆಯ ಉಗ್ರ ರಶೀದ್ ಘಾಜಿ ಹಾಗೂ ಜೆಇಎಂನ ಕಮಾಂಡರ್ ಕರಂ ಸೇನಾಪಡೆ ಗುಂಡೇಟಿಗೆ ಬಲಿಯಾಗಿದ್ದಾನೆ.  ಈ ಮೂಲಕ ಸಿಆರ್‌ಪಿಎಫ್ ಯೋಧರ ಬಲಿಗೆ ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.

ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 44 ಮಂದಿ ಸಿಆರ್‌ಪಿಎಫ್ ಯೋಧರ ಮಾರಣಹೋಮವಾಗಿತ್ತು. ಈ ಹಿನ್ನೆಲೆಯಲ್ಲಿ ಪುಲ್ವಾಮಾದಲ್ಲಿ ನಡೆದ ಆತ್ಮಹತ್ಯಾ ಪ್ರಕರಣದ ರೂವಾರಿ ಅಬ್ದುಲ್ ರಶೀದ್ ಘಾಜಿ, ಪಿಂಗ್ಲಾನ್‌ನಲ್ಲಿ ಅಡಗಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸೇನಾಪಡೆ ಇಡೀ ಪ್ರದೇಶವನ್ನು ಸುತ್ತುವರೆಯಿತು. ಈ ವೇಳೆ ಭಯೋತ್ಪಾದಕರು ಮತ್ತು ಸೇನಾಪಡೆಗಳ ನಡುವೆ ಮುಂಜಾನೆಯಿಂದಲೇ ಭೀಕರ ಗುಂಡಿನ ಕಾಳಗ ನಡೆಯಿತು. ಈ ಗುಂಡಿನ ಕಾಳಗದಲ್ಲಿ ಮೇಜರ್ ಸೇರಿದಂತೆ, ನಾಲ್ವರು ಯೋಧರು ಹಾಗೂ ಓರ್ವ ನಾಗರೀಕ ಸಾವನ್ನಪ್ಪಿದ್ದರು.

10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಉಗ್ರರು ಅಡಗಿದ್ದ ಕಟ್ಟಡವನ್ನೇ ಧ್ವಂಸಗೊಳಿಸಿತು. ಈ ಘಟನೆಯಲ್ಲಿ ಅಬ್ದುಲ್ ರಶೀದ್ ಘಾಜಿ ಹಾಗೂ ಕಮಾಂಡರ್ ಕರಂ ಹತರಾದರು.  




Share this Story:

Follow Webdunia kannada

ಮುಂದಿನ ಸುದ್ದಿ

ಅವರು ಯಾರ ಸಮಾಧಿಗೆ ಪೂಜೆ ಸಲ್ಲಿಸಿದ್ರು ಗೊತ್ತಾ?