Publish Date: Wed, 20 Feb 2019 (15:42 IST)
Updated Date: Wed, 20 Feb 2019 (15:44 IST)
ವಿಶ್ವವಿಖ್ಯಾತಿ ಕುಂಭಮೇಳದಲ್ಲಿ ಅಮ್ಮನವರಿಗೆ ಅಪಚಾರ ಮಾಡಲಾಗಿದೆ.
ಮಹಾಲಕ್ಷ್ಮಿ ಅಮ್ಮನವರಿಗೆ ಅಪಚಾರ ಮಾಡಿರುವ ಘಟನೆ ನಡೆದಿದೆ. ಟಿ.ನರಸೀಪುರದ ತ್ರಿವೇಣಿ ಸಂಗಮದ ಗುಂಜನರಸಿಂಹ ಸ್ವಾಮಿ ದೇವಾಲಯದ ಒಳಭಾಗವಿರುವ ಮಹಾಲಕ್ಷ್ಮಿ ಅಮ್ಮನವರ ಗರ್ಭಗುಡಿಯಲ್ಲಿ ಈ ಘಟನೆ ನಡೆದಿದೆ.
ಗರ್ಭಗುಡಿಗೆ ಬೀಗ ಹಾಕಿ ಅಪಚಾರವೆಸಗಿರುವ ದೇವಸ್ಥಾನದ ಅರ್ಚಕರು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
ಕೇವಲ ಗರ್ಭಗುಡಿಯ ಬಾಗಿಲ ಬಳಿಯೇ ನಿಂತು ದರ್ಶನ ಪಡೆದ ಭಕ್ತಾಧಿಗಳು, ಅರ್ಚಕರ ನಡೆಗೆ ಕಿಡಿಕಾರಿದ್ದಾರೆ.
ಲಕ್ಷಾಂತರ ಭಕ್ತರ ದರ್ಶನ ಭಾಗ್ಯಕ್ಕೆ ತಣ್ಣೀರೆರಚಿದ ಗುಂಜನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಗುಂಜನರಸಿಂಹ ದೇವಾಲಯದ ಒಳಗಡೆ ಇರುವ ಪ್ರಮುಖ ಗರ್ಭಗುಡಿ ಮಹಾಲಕ್ಷ್ಮಿ ಅಮ್ಮನವರ ಗರ್ಭಗುಡಿಯಾಗಿದೆ. ಇದಕ್ಕೆ ಬೀಗವನ್ನು ಅರ್ಚಕರು ಹಾಕಿದ್ದಾರೆ. ಆಡಳಿತ ಮಂಡಳಿ ಮತ್ತು ಅರ್ಚಕರ ವಿರುದ್ಧ ಬೇಸರ ವ್ಯಕ್ತಪಡಿಸಿದ ಭಕ್ತಾಧಿಗಳು, ಕುಂಭಮೇಳದ ಕೊನೆಯ ದಿನ ನಡೆದಿರುವಂತಹ ಘಟನೆಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.