Publish Date: Sun, 17 Feb 2019 (11:23 IST)
Updated Date: Sun, 17 Feb 2019 (11:25 IST)
ವಿಶ್ವಪ್ರಸಿದ್ಧ ಕುಂಭಮೇಳಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಜಿ.ಟಿ.ದೇವೇಗೌಡರಿಂದ ಸ್ಥಳ ಪರಿಶೀಲನೆ ನಡೆಸಲಾಗಿದೆ. ಸಚಿವರಿಗೆ ಶಾಸಕ ಎಂ.ಅಶ್ವಿನ್ ಕುಮಾರ್ ಮತ್ತು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸಾಥ್ ನೀಡಿದ್ದಾರೆ.
ಅಂತಿಮ ಹಂತದ ಸಿದ್ಧತೆ ಬಗ್ಗೆ ಮಾಹಿತಿ ಪಡೆದ ಉಸ್ತುವಾರಿ ಸಚಿವ ಅಗತ್ಯ ಸೂಚನೆ ನೀಡಿದರು.
ಲೈಟಿಂಗ್ಸ್, ತೇಲುಸೇತುವೆ, ಯಾಗಮಂಟಪ, ಧಾರ್ಮಿಕ ಸಭಾ ಮಂಟಪ ವೀಕ್ಷಣೆ ಮಾಡಿದರು. ವೀರಮರಣ ಹೊಂದಿದ ಯೋಧರಿಗೆ ನಮನವನ್ನು ಇದೇ ಸಂದರ್ಭದಲ್ಲಿ ಸಚಿವ ಜಿಟಿಡಿ ಸಲ್ಲಿಸಿದರು.
ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಕುಂಭಸ್ನಾನ ಮಾಡಿ ಕುಂಭಮೇಳ ಯಶಸ್ವಿಗೆ ಮನವಿ ಮಾಡಿದರು. ಸಚಿವ ಸಂಪುಟ ಸಚಿವರು ಕುಂಭಮೇಳಕ್ಕೆ ಆಗಮಿಸುದಾಗಿ ಹೇಳಿದ್ದಾರೆ ಎಂದರು.