Publish Date: Sun, 10 Feb 2019 (16:29 IST)
Updated Date: Sun, 10 Feb 2019 (16:31 IST)
ಅಮ್ಮ ರಾಜಕೀಯ ಪ್ರವೇಶ ಮಾಡಿದರೆ ಅದಕ್ಕೆ ನಾನು ಬೆಂಬಲ ಕೊಡುವೆ ಎಂದು ಹೇಳಿಕೆ ನೀಡಿದ್ದಾರೆ.
ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ ಅಂಬರೀಶ್ ಪುತ್ರ, ನಟ ಅಭಿಷೇಕ್ ಈ ಹೇಳಿಕೆ ನೀಡಿದ್ದಾರೆ. ಫೆಬ್ರವರಿ 14ರಂದು ಅಮರ್ ಟೀಸರ್ ಬಿಡುಗಡೆ ಆಗುತ್ತದೆ. ನಮ್ಮ ತಂದೆ ಅಂಬರೀಶ್ ಫೆಬ್ರವರಿ 14 ರಂದು ಸಿನಿಮಾ ಬಗ್ಗೆ ಕಾರ್ಯಕ್ರಮ ಮಾಡಬೇಕೆಂದಿದ್ದರು. ನನ್ನ ಪ್ರತಿ ಸಿನಿಮಾದಲ್ಲೂ ಅಂಬರೀಶ್ ಇರ್ತಾರೆ ಎಂದು ಹೇಳಿದರು.
ಅಮ್ಮ ರಾಜಕೀಯ ಪ್ರವೇಶ ಮಾಡಿದ್ರೆ ಬೆಂಬಲ ಇರುತ್ತದೆ ಎಂದ ಅವರು, ಅವರು ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ನಟ ಅಭಿಷೇಕ್ ಹೇಳಿದ್ದಾರೆ.