Publish Date: Fri, 08 Feb 2019 (09:22 IST)
Updated Date: Fri, 08 Feb 2019 (09:23 IST)
ಬೆಂಗಳೂರು: ಕೆಜಿಎಫ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಮೊದಲ ದಿನವೇ ಬರೆದ ಸಿನಿಮಾ. ಆದರೆ ಆ ದಾಖಲೆಯನ್ನು ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಮುರಿದಿದೆಯಾ?
ಹಾಗೊಂದು ಸುದ್ದಿ ಇದೀಗ ಗಾಂಧಿನಗರದಲ್ಲಿ ಓಡಾಡುತ್ತಿದೆ. ನಟಸಾರ್ವಭೌಮ ನಿನ್ನೆ ರಿಲೀಸ್ ಆಗಿದ್ದು, ಜನರಿಂದ ಅದ್ಭುತ ಪ್ರತಿಕ್ರಿಯೆ ಲಭ್ಯವಾಗಿದೆ. ಈ ಸಿನಿಮಾದ ಒಂದು ದಿನದ ಗಳಿಕೆ ಇದೀಗ ಕೆಜಿಎಫ್ ಸಿನಿಮಾದ ಮೊದಲ ದಿನದ ಗಳಿಕೆಯನ್ನೂ ಮೀರಿಸಿದೆ ಎಂಬ ಸುದ್ದಿ ಓಡಾಡುತ್ತಿದೆ.
ಕೆಜಿಎಫ್ ಮೊದಲ ದಿನ ಸುಮಾರು 18 ಕೋಟಿ ಗಳಿಕೆ ಮಾಡಿತ್ತು ಎನ್ನಲಾಗಿತ್ತು. ಆದರೆ ನಟಸಾರ್ವಭೌಮ 20 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂಬ ಸುದ್ದಿ ಬಂದಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಬಂದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ