ಪುನೀತ್ ರಾಜ್ ಕುಮಾರ್ ಗೆ ಆಲ್ ದಿ ಬೆಸ್ಟ್ ಹೇಳಿದ ರಾಕಿಂಗ್ ಸ್ಟಾರ್ ಯಶ್

ಗುರುವಾರ, 7 ಫೆಬ್ರವರಿ 2019 (10:03 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ ಬಿಡುಗಡೆ ಹಿನ್ನಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಶುಭ ಕೋರಿದ್ದಾರೆ.


ನಟಸಾರ್ವಭೌಮ ಅಡಿಯೋ ರಿಲೀಸ್ ಗೆ ಆಹ್ವಾನವಿದ್ದರೂ ಐಟಿ ದಾಳಿಯಿಂದಾಗಿ ಯಶ್ ಗೆ ಭಾಗವಹಿಸಲಾಗಲಿಲ್ಲ. ಆದರೆ ಇದೀಗ ರಿಲೀಸ್ ವೇಳೆಗೆ ಪವರ್ ಸ್ಟಾರ್ ಗೆ ಶುಭ ಕೋರುವುದನ್ನು ಯಶ್ ಮರೆಯಲಿಲ್ಲ.

ಪುನೀತ್ ಮತ್ತು ನಟಸಾರ್ವಭೌಮ ತಂಡಕ್ಕೆ ಶುಭ ಕೋರಿ ಟ್ವೀಟ್ ಮಾಡಿರುವ ಯಶ್ ‘ತಮ್ಮ ವಿಶಿಷ್ಟ ನೃತ್ಯ ಹಾಗೂ ವಿಭಿನ್ನ ಪಾತ್ರ ಪೋಷಣೆಯ ಮೂಲಕ ಅಪಾರ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಪವರ್ ಸ್ಟಾರ್ ಅಪ್ಪು ಸರ್ ಅಭಿನಯದ ನಟಸಾರ್ವಭೌಮ ಚಿತ್ರವು ಅಭಿಮಾನಿಗಳ ಮನತಣಿಸಿ, ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ’ ಎಂದು ಯಶ್ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತನ್ನದೇ ತದ್ರೂಪಿನ ಜೂಲಿಯಾ ಜತೆ ಚ್ಯಾಟ್ ಮಾಡಿದ ಅನುಷ್ಕಾ ಶರ್ಮಾ