Daily Horoscope

Select Your Language

Notifications

webdunia
webdunia
webdunia
webdunia

ರಾಜಕೀಯ ಪ್ರವೇಶ; ಸುಮಲತಾ ಅಂಬರೀಶ್ ಹೇಳಿದ್ದೇನು?

ಸುಮಲತಾ
ಮಂಡ್ಯ ಲೋಕಸಭೆ ಚುನಾವಣೆ ಅಭ್ಯರ್ಥಿಯಾಗಿ ಕಣದಲ್ಲಿ ಸ್ಪರ್ಧಿಸುವ ಕುರಿತು ಇದೇ ಮೊದಲ ಬಾರಿಗೆ ಸುಮಲತಾ ಅಂಬರೀಶ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಆದಿಚುಂಚನಗಿರಿ ಮಠದಲ್ಲಿ ಅಂಬರೀಶ್ ಪತ್ನಿ ಸುಮಲತಾ ಹೇಳಿಕೆ ನೀಡಿದ್ದಾರೆ. ಎರಡು ತಿಂಗಳಿನಿಂದಲೂ ಮಠಕ್ಕೆ ಬರಬೇಕೆಂದುಕೊಂಡಿದ್ದೆ ಇವತ್ತು ಈಡೇರಿದೆ. ಅಭಿಷೇಕ್ ನ ಅಮರ್ ಸಿನಿಮಾ ಟೀಸರ್ ರಿಲೀಸ್ ಆಗ್ತಿದೆ. ಆದ್ದರಿಂದ ಆಶೀರ್ವಾದ ಪಡೆದಿದ್ದೇವೆ ಎಂದರು.

ಇನ್ನು ರಾಜಕೀಯಕ್ಕೆ ಬರುವ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ರಾಜಕೀಯಕ್ಕೆ ಬರಲು ಜನರ ಒತ್ತಾಯ ಇದೆ.
ಆ ಬಗ್ಗೆ ಹಿರಿಯರ ಸಲಹೆ ಪಡೆದು ನಿರ್ಧಾರ ಪ್ರಕಟಿಸುವೆ ಎಂದಿದ್ದಾರೆ. ರಾಜಕೀಯ ಪ್ರವೇಶ ಸಂದರ್ಭ ಬಂದಾಗ ಆ ಬಗ್ಗೆ ಮಾತನಾಡುವೆ. ಅಂಬರೀಶ್ ಸ್ನೇಹಿತರು, ರಾಜಕೀಯ ಮುಖಂಡರ ಬಗ್ಗೆ ಚರ್ಚೆ ಮಾಡಿ ಅವರ ಸಲಹೆ ಪಡೆದು ರಾಜಕೀಯ ಪ್ರವೇಶದ ನಿರ್ಧಾರ ಮಾಡುವೆ ಎಂದಿದ್ದಾರೆ.

ನಾನು ಇನ್ನು ಯಾವುದೇ ರಾಜಕೀಯ ಪಕ್ಷ ಸೇರಿಲ್ಲ. ನನಗೆ ರಾಜಕೀಯ ಆಸಕ್ತಿ ಇರಲಿಲ್ಲ. ಆದರೆ ರಾಜಕೀಯ ಪ್ರವೇಶ ಬಗ್ಗೆ ಚರ್ಚಿಸುವ ಸಂದರ್ಭ ಬರುತ್ತದೆ ಅಂತ ನಿರೀಕ್ಷಿಸಿರಲಿಲ್ಲ ಎಂದರು. ಅಂಬಿ ಅಭಿಮಾನಿಗಳು ನಮ್ಮ ಜೊತೆ ಇದ್ದಾರೆ.‌ ಅದೇ ನನಗೆ ಸಂತಸ ತಂದಿದೆ. ನಾನು ಚುನಾವಣೆಗೆ ಸ್ಪರ್ಧಿಸಿದ್ರೆ ಮಂಡ್ಯದಲ್ಲಿ ಮಾತ್ರ. ಬೇರೆಡೆ ನಿಲ್ಲುವ ಪ್ರಶ್ನೆಯೇ ಇಲ್ಲ ಎಂದೂ ಸುಮಲತಾ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ವೃದ್ಧೆಯ ಮೇಲೆ ಹಲ್ಲೆ ನಡೆಸಿ ಮಾಡಿದ್ದೇನು ಗೊತ್ತಾ?