Select Your Language

Notifications

webdunia
webdunia
webdunia
webdunia

ಗ್ರಾಮ ಪಂಚಾಯಿತಿ ಸದಸ್ಯ ಸತ್ತದ್ದು ಏಕೆ ಗೊತ್ತಾ?

ಗ್ರಾಮ ಪಂಚಾಯಿತಿ ಸದಸ್ಯ ಸತ್ತದ್ದು ಏಕೆ ಗೊತ್ತಾ?
ದಾವಣಗೆರೆ , ಭಾನುವಾರ, 17 ಫೆಬ್ರವರಿ 2019 (11:46 IST)
ಸರಕಾರ ಎಷ್ಟೇ ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದರೂ ಅನ್ನದಾತರ ಸಾವಿನ ಸರಣಿ ಮಾತ್ರ ಮುಂದುವರಿಯುತ್ತಲೇ ಇದೆ.

ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆಗೆ ರೈತನೊಬ್ಬ ಶರಣಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ರೈತ ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಕಾಶ್ ಬೆಳ್ಳೂಡಿ ಗ್ರಾಮ ಪಂಚಾಯತಿ ಸದಸ್ಯ ಕೂಡ ಆಗಿದ್ದಾರೆ.  ಬೆಳ್ಳೂಡಿ ಗ್ರಾಮದಲ್ಲಿ ಜಮೀನನ್ನು ಹೊಂದಿದ ರೈತ,
ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಯ ಬ್ಯಾಂಕ್ ಗಳು ಸೇರಿದಂತೆ ಕೈ ಸಾಲ ಮಾಡಿಕೊಂಡಿದ್ದರು.

ಲಕ್ಷಾಂತರ ರೂಪಾಯಿ ಸಾಲ ಹೊಂದಿದ್ದ ರೈತ ಪ್ರಕಾಶ್ ಸಾಲದ ಬಾಧೆಗೆ ಹೆದರಿ ವಿಷ ಕುಡಿದು ಆತ್ಮಹತ್ಯೆ ಯತ್ನಿಸಿದ್ದ, ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಲಿಂಗಾಯತ ಶರಣೆಯರಲ್ಲಿ ಅಸಮಾನತೆ ಬಾವುಟ?