Publish Date: Sat, 16 Feb 2019 (12:48 IST)
Updated Date: Sat, 16 Feb 2019 (12:50 IST)
ಪ್ರೇಮ ವೈಫಲ್ಯದ ಹಿನ್ನಲೆಯಲ್ಲಿ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಹಾರಾಣಿ ಕಾಲೇಜಿನ ಪದವಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಬಾಪೂಜಿನಗರದ ದೀಪಾ(21) ಆತ್ಮಹತ್ಯೆ ಮಾಡಿಕೊಂಡವರು. ಮಹಾರಾಣಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ ದೀಪಾ ಅಪ್ಪ ಅಮ್ಮ ಇಲ್ಲದಿದ್ದರಿಂದ ಕಳೆದ ಐದಾರು ವರ್ಷಗಳಿಂದಲೂ ಬಾಪೂಜಿನಗರದಲ್ಲಿರುವ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದಳು.
ದೊಡ್ಡಮ್ಮನ ಮನೆಯ ಪಕ್ಕದಲ್ಲೇ ಇದ್ದ ಸುರೇಶ್ ಎಂಬಾತನೊಂದಿಗೆ ದೀಪಾಳಿಗೆ ಪ್ರೇಮಾಂಕುರವಾಗಿತ್ತು. ಹಲವು ವರ್ಷಗಳಿಂದ ಮನೆಯವರಿಗೂ ಗೊತ್ತಿಲ್ಲದೆ ದೀಪಾ ಹಾಗೂ ಸುರೇಶ್ ಪ್ರೀತಿಸುತ್ತಿದ್ದರು. 4 ದಿನಗಳ ಹಿಂದೆ ಸುರೇಶ್ ಮತ್ತೊಂದು ಯುವತಿಯನ್ನು ಕರೆದುಕೊಂಡು ಮನೆ ಬಿಟ್ಟು ಓಡಿ ಹೋಗಿದ್ದಾನೆ.
ಇದರಿಂದ ಆಕ್ರೋಶಗೊಂಡ ದೀಪಾ ರಾತ್ರಿ ಸುರೇಶ್ಗೆ ಕರೆ ಮಾಡಿ ಸಾಕಷ್ಟು ವಾಗ್ವಾದ ನಡೆಸಿದ್ದಾಳೆ. ಆದರೆ ಸುರೇಶ್ ನಾನು ನಿನ್ನನ್ನ ಪ್ರೀತಿಸಿಲ್ಲ, ಮದುವೆಯೂ ಆಗಲ್ಲ. ನಾನು ಬೇರೆ ಹುಡುಗಿಯನ್ನ ಮದುವೆಯಾಗಿದ್ದೇನೆ ಎಂದಿದ್ದಾನೆ. ಆತನ ಮಾತಿನಿಂದ ನೊಂದ ದೀಪಾ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.