Publish Date: Wed, 27 Mar 2019 (10:38 IST)
Updated Date: Wed, 27 Mar 2019 (10:45 IST)
ಮಂಡ್ಯ : ದರ್ಶನ್ ಹಾಗೂ ಯಶ್ ಜೋಡೆತ್ತಲ್ಲ ನಾನು, ಡಿಕೆಶಿ ಜೋಡೆತ್ತುಗಳು ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಇದೀಗ ಬಿಜೆಪಿ ಕಾರ್ಯಕರ್ತರು ವ್ಯಂಗವಾಡುವುದರ ಮೂಲಕ ತಿರುಗೇಟು ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಎರಡು ಎತ್ತುಗಳ ಮಧ್ಯೆ ನಿಂತು, ‘ನಾವೂ ಒಂಟಿ ಒಂಟಿ ಎತ್ತುಗಳನ್ನು ಜೊತೆ ಹಾಕಿದ್ದೇವೆ, ಆದರೆ ಅವು ಕೂಡಲೇ ಇಲ್ಲ. ಒಂದು ಕನಕಪುರದ ಬಿಳಿ ಎತ್ತು, ಇನ್ನೊಂದು ಹಾಸನದ ಕರಿ ಎತ್ತು. ಕರಿ ಎತ್ತಿನ ಜೊತೆ ಸೇರಿ ಬಿಳಿ ಎತ್ತು ಹಾಳಾಗಿದೆ. ಕರಿ ಎತ್ತಿನ ಜೊತೆ ಸೇರಿ ಹಾಳಾಗಬೇಡ ಎಂದು ಬಿಳಿ ಎತ್ತಿಗೆ ಕಿವಿಮಾತು ಹೇಳಿದ್ದೇನೆ’ ಎಂದು ವ್ಯಂಗ್ಯವಾಡುವುದರ ಮೂಲಕ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಹಾಗೇ ‘ಮುದಿ ಎತ್ತುಗಳು ಕೆಲಸ ಮಾಡಲ್ಲ, ಮೇ 23ರಂದು ಈ ಮುದಿ ಎತ್ತುಗಳನ್ನು ಸಂತೆಗೆ ಕೊಟ್ಟು ಬಿಡುತ್ತೀವಿ. ಮಂಡ್ಯ ಜನರನ್ನು ದಡ್ಡರು ಮಾಡಬೇಡಿ. ಮುದಿ ಎತ್ತುಗಳನ್ನು ಮಂಡ್ಯ ಜನರು ಸಂತೆಗೆ ಕಳುಹಿಸಲಿದ್ದಾರೆ’ ಎಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
pavithra
Publish Date: Wed, 27 Mar 2019 (10:38 IST)
Updated Date: Wed, 27 Mar 2019 (10:45 IST)