ಮಾಜಿ ಸಿಎಂ ಸಿದ್ದರಾಮಯ್ಯನವರ ಮೇಲೆ ಹಾಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಅಸಮಧಾನಗೊಂಡಿದ್ದಾರೆ.
ಹಾಸನ ಮೇಲಿರೋ ಪ್ರೀತಿ ಮಂಡ್ಯದ ಮೇಲೆ ಸಿದ್ದುಗೆ ಇಲ್ಲ ಎಂದು ಸಿದ್ದರಾಮಯ್ಯ ಮೇಲೆ ಸಿಟ್ಟಾಗಿದ್ದಾರಂತೆ ಸಿಎಂ ಹೆಚ್. ಡಿ. ಕುಮಾರಸ್ವಾಮಿ.
									
			
			 
 			
 
 			
					
			        							
								
																	ಸಿದ್ದರಾಮಯ್ಯ ನಡೆ ಬಗ್ಗೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದು, ಹಾಸನ ಕೈ ನಾಯಕರ ಸಭೆ ಕರೆದು ಪ್ರಜ್ವಲ್ ಗೆ ಬೆಂಬಲ ನೀಡಿ ಅಂತ ಮಾಜಿ ಸಿಎಂ ಹೇಳಿದ್ದರು. 
									
										
								
																	ಆದ್ರೆ, ಮಂಡ್ಯ ಕೈ ಮುಖಂಡರ ಸಭೆಯನ್ನ ಒಮ್ಮೆಯೂ ಕರೆದಿಲ್ಲ. ಹಾಸನ ಕೈ ಮುಖಂಡರ ಜೊತೆ ಹೆಚ್. ಡಿ. ರೇವಣ್ಣರನ್ನ ಕರೆದು ಸಂಧಾನ ಮಾಡ್ತಾರೆ ಸಿದ್ದರಾಮಯ್ಯ.
									
											
							                     
							
							
			        							
								
																	ಆದ್ರೆ ಮಂಡ್ಯ ಕಾಂಗ್ರೆಸ್ ನಾಯಕರ ಹಾಗೂ ಜೆಡಿಎಸ್ ಮುಖಂಡರನ್ನ ಸೇರಿಸೋ ಕೆಲಸವನ್ನೇಕೆ ಮಾಡಿಲ್ಲ ಎಂಬುದೇ ಸಿಎಂ ಗರಂ ಆಗಲು ಕಾರಣ ಎನ್ನಲಾಗಿದೆ.
									
			                     
							
							
			        							
								
																	ಹಾಸನದ ಮೇಲಿನ ಪ್ರೀತಿಯನ್ನು ಮಂಡ್ಯದ ಮೇಲೆ ಸಿದ್ದರಾಮಯ್ಯ ತೋರುತ್ತಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಸಿದ್ದರಾಮಯ್ಯ ನಡೆ ಬಗ್ಗೆ ಕುತೂಹಲ ಮೂಡಿದೆ.