Select Your Language

Notifications

webdunia
webdunia
webdunia
webdunia

ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಹೆಸರಿನ ಮೂವರು ಕಣಕ್ಕೆ! ಇದು ಪಕ್ಕಾ ‘ಅಯೋಗ್ಯ’ ಸಿನಿಮಾ ಸೀನ್!

ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಹೆಸರಿನ ಮೂವರು ಕಣಕ್ಕೆ! ಇದು ಪಕ್ಕಾ ‘ಅಯೋಗ್ಯ’ ಸಿನಿಮಾ ಸೀನ್!
ಬೆಂಗಳೂರು , ಬುಧವಾರ, 27 ಮಾರ್ಚ್ 2019 (10:11 IST)
ಬೆಂಗಳೂರು: ಅಯೋಗ್ಯ ಸಿನಿಮಾದಲ್ಲಿ ನಾಯಕ ಮತ್ತು ಖಳನಾಯಕನ ನಡುವೆ ಚುನಾವಣೆ ನಡೆಯುವಾಗ ಕನ್ ಫ್ಯೂಸ್ ಮಾಡಲೆಂದೇ ಒಂದೇ ಹೆಸರಿನ ಹಲವರು ನಾಮಪತ್ರ ಸಲ್ಲಿಸುವ ಸೀನ್ ಒಂದಿದೆ.


ಅದೇ ಸೀನ್ ಇದೀಗ ಮಂಡ್ಯ ಲೋಕಸಭಾ ಕಣದಲ್ಲೂ ರಿಪೀಟ್ ಆಗಿದೆ. ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ನಡುವಿನ ಜಿದ್ದಾಜಿದ್ದಿನ ಕಣವಾಗಿ ಈ ಕ್ಷೇತ್ರ ಮಾರ್ಪಟ್ಟಿದೆ. ಸ್ಯಾಂಡಲ್ ವುಡ್ ನ ಎರಡು ತಾರೆಯರಿಗೆ ಇದು ಪ್ರತಿಷ್ಠೆಯ ಕಣವಾಗಿದೆ. ಅತ್ತ ಸಿಎಂ ಕುಮಾರಸ್ವಾಮಿ ತಮ್ಮ ಪುತ್ರನನ್ನು ಗೆಲ್ಲಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದರೆ, ಅಂಬರೀಶ್ ಪ್ರೀತಿಯ ಜನರೇ ನನಗೆ ಶ್ರೀರಕ್ಷೆ ಎಂದು ಸುಮಲತಾ ತಿರುಗೇಟು ಕೊಡುತ್ತಿದ್ದಾರೆ.

ಈ ಜಿದ್ದಾಜಿದ್ದಿನ ನಡುವೆ ಮಂಡ್ಯ ಕಣದಲ್ಲಿ ಇದೀಗ ಸುಮಲತಾ ಹೆಸರಿನ ಮೂವರು ನಾಮಪತ್ರ ಸಲ್ಲಿಸಿದ್ದು, ಮತದಾರರಿಗೆ ಕನ್ ಫ್ಯೂಸ್ ಆಗುವ ಹಾಗಿದೆ. ಅಂಬರೀಶ್ ಪತ್ನಿ ಎ. ಸುಮಲತಾ ಅಲ್ಲದೆ, ಸುಮಲತಾ ಮಂಜೇಗೌಡ, ಸುಮಲತಾ ಸಿದ್ಧೇಗೌಡ, ಸುಮಲತಾ ಎಂಬ ಮೂವರು ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ.

ಅಯೋಗ್ಯ ಸಿನಿಮಾದಲ್ಲಿ ಖಳನಾಯಕ ಬಚ್ಚೇಗೌಡ ಹೆಸರಿನಲ್ಲಿ ಹಲವರು ನಾಮಪತ್ರ ಸಲ್ಲಿಸಿ, ಮತದಾರರಿಗೆ ಕನ್ ಫ್ಯೂಸ್ ಮಾಡುವ ತಂತ್ರ ಹೆಣೆಯುವ ಸೀನ್ ಇತ್ತು. ಇದೀಗ ಮಂಡ್ಯ ಕಣದಲ್ಲೂ ಇದೇ ತಂತ್ರಗಾರಿಕೆಯಾ ಅಥವಾ ಕಾಕತಾಳೀಯ ಎಂಬುದು ಸಸ್ಪೆನ್ಸ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ವಯಸ್ಸಿನಲ್ಲಿ ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಬೇಕಂತೆ ಗೊತ್ತಾ?