Select Your Language

Notifications

webdunia
webdunia
webdunia
webdunia

ಸುಮಲತಾ ಅಂಬರೀಶ್ ಪರ ಪ್ರಚಾರಕ್ಕೆ ಈ ಸೂಪರ್ ಸ್ಟಾರ್ ಗಳು?!

ಸುಮಲತಾ ಅಂಬರೀಶ್ ಪರ ಪ್ರಚಾರಕ್ಕೆ ಈ ಸೂಪರ್ ಸ್ಟಾರ್ ಗಳು?!
ಬೆಂಗಳೂರು , ಬುಧವಾರ, 27 ಮಾರ್ಚ್ 2019 (10:00 IST)
ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣಾ ಕಣದಲ್ಲಿ ಸ್ಪರ್ಧೆಗೆ ನಿಂತಿರುವ ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಪರವಾಗಿ ಪ್ರಚಾರ ನಡೆಸಲು ದಕ್ಷಿಣ ಭಾರತದ ಸೂಪರ್ ಸ್ಟಾರ್ ಗಳು ಬರುತ್ತಿದ್ದಾರಾ?


ಈ ಪ್ರಶ್ನೆಗೆ ಸುಮಲತಾ ಸ್ವತಃ ಸ್ಪಷ್ಟನೆ ನೀಡಿದ್ದಾರೆ. ಸುಮಲತಾ ಪರ ರಜನೀಕಾಂತ್, ತೆಲುಗಿನ ಮೋಹನ್ ಬಾಬು, ಚಿರಂಜೀವಿ, ಶತ್ರುಘ್ನ ಸಿನ್ಹಾ ಮುಂತಾದ ಸೂಪರ್ ಸ್ಟಾರ್ ಗಳು ಅಂಬಿ ಮೇಲಿನ ಪ್ರೀತಿಯಿಂದ ಸುಮಲತಾ ಪರವಾಗಿ ಪ್ರಚಾರ ನಡೆಸಲು ಬರ್ತಾರೆ ಎಂಬ ವದಂತಿ ಬಂದಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಮಲತಾ ಯಾರೂ ಬರಲ್ಲ, ಅದೆಲ್ಲಾ ಸುಳ್ಳು ಸುದ್ದಿ ಎಂದಿದ್ದಾರೆ. ಅಷ್ಟೇ ಅಲ್ಲ ತಮ್ಮ ಪರವಾಗಿ ದರ್ಶನ್ ಮತ್ತು ಯಶ್ ಮಾತ್ರ ಸ್ಟಾರ್ ಪ್ರಚಾರಕರಾಗಿರುತ್ತಾರೆ ಎಂದಿದ್ದಾರೆ. ಅಲ್ಲಿಗೆ ಸಿನಿಮಾ ರಂಗದ ಗಣ್ಯರನ್ನು ರಾಜಕೀಯಕ್ಕೆ ತಾವಾಗಿಯೇ ಎಳೆದುತರುವುದಿಲ್ಲ ಎಂದು ಸುಮಲತಾ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ರಾಧಿಕಾ ಹೀಗೆ ಮಾಡಲು ಹೇಳಿದರೆ ಫುಲ್ ನಾಚ್ಕೋತಾರಂತೆ ರಾಕಿಂಗ್ ಸ್ಟಾರ್ ಯಶ್!