Select Your Language

Notifications

webdunia
webdunia
webdunia
webdunia

ಮುಖ್ಯಮಂತ್ರಿ ವಿರುದ್ಧ ಸಿಡಿದೆದ್ದ ಸುಮಲತಾ ಆಯೋಗಕ್ಕೆ ದೂರು

ಮುಖ್ಯಮಂತ್ರಿ ವಿರುದ್ಧ ಸಿಡಿದೆದ್ದ ಸುಮಲತಾ ಆಯೋಗಕ್ಕೆ ದೂರು
ಮಂಡ್ಯ , ಮಂಗಳವಾರ, 26 ಮಾರ್ಚ್ 2019 (09:42 IST)
ಮಂಡ್ಯ: ಮಂಡ್ಯ ಲೋಕಸಭೆ ಚುನಾವಣಾ ಕಣ ರಂಗೇರುತ್ತಿದ್ದು, ತಮ್ಮ ವಿರುದ್ಧ ಪರೋಕ್ಷ ಸಮರ ಸಾರಿರುವ ಸಿಎಂ ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಶ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.


ಮುಖ್ಯಮಂತ್ರಿಗಳು ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನನ್ನ ಮನೆ ಬಳಿ ಗುಪ್ತಚರ ಹಾಗೂ ಪೊಲೀಸರನ್ನು ಬಿಟ್ಟಿದ್ದಾರೆ. ನಮ್ಮ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ. ನಾವು ಮಂಡ್ಯದಲ್ಲಿ ಸಮಾವೇಶ ನಡೆಸುವಾಗ ಕೇಬಲ್, ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತಿದೆ ಎಂದು ಸುಮಲತಾ ದೂರಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಕೂಡಾ ಪೋಸ್ಟ್ ಮಾಡಿರುವ ಸುಮಲತಾ ನಾನು ಸೌಮ್ಯವಾಗಿ ಪ್ರೀತಿಯಿಂದ ಭಾರತೀಯ ಪ್ರಜಾಪ್ರಭುತ್ವದ ಘನತೆಯನ್ನು ಮನದಲ್ಲಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇನೆ. ನನ್ನ ಆದರ್ಶಗಳನ್ನು ಮಂಡ್ಯದ ಜನ ಸ್ವೀಕರಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲ, ತಮ್ಮ ಪರ ಪ್ರಚಾರ ಮಾಡುತ್ತಿರುವ ದರ್ಶನ್, ಯಶ್ ಬಗ್ಗೆ ಕೀಳುಮಟ್ಟದಲ್ಲಿ ಹೇಳಿಕೆ ನೀಡುತ್ತಿರುವ ಜೆಡಿಎಸ್ ನಾಯಕರ ವಿರುದ್ಧವೂ ಕಿಡಿ ಕಾರಿರುವ ಸುಮಲತಾ ಇಂತಹದ್ದಕ್ಕೆಲ್ಲಾ ನಾವು ಜಗ್ಗಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಮಂತ್ರಿ ಶ್ರಮಯೋಗಿ ಮನಧನ್ ಯೋಜನೆಯಲ್ಲಿ ಮಾಸಿಕ 3000 ಪಡೆಯಿರಿ