Publish Date: Sun, 24 Mar 2019 (12:33 IST)
Updated Date: Sun, 24 Mar 2019 (12:34 IST)
ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಸುಮಲತಾ ಅಂಬರೀಶ್ ಬೆಂಬಲಕ್ಕೆ ನಿಂತಿರುವ ನಟ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ಪ್ರಕರಣದ ಬಗ್ಗೆ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯ ಕಣದಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿದಿರುವ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡಗೆ ಪಕ್ಷೇತರರಾಗಿ ನಿಂತಿರುವ ಸುಮಲತಾ ಅಂಬರೀಶ್ ಭಾರೀ ಪೈಪೋಟಿಯೊಡ್ಡುತ್ತಿದ್ದಾರೆ. ಇದೇ ಕಾರಣಕ್ಕೆ ಅವರ ಬೆಂಬಲಕ್ಕೆ ನಿಂತ ನಟ ದರ್ಶನ್ ನಿವಾಸದ ಮೇಲೆ ನಿನ್ನೆ ಕಲ್ಲಲು ತೂರಾಟ ನಡೆಸಿತ್ತು. ಇದನ್ನು ನಿಖಿಲ್ ಬೆಂಬಲಿಗರೇ ಮಾಡಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಖಿಲ್ ಗೌಡ ‘ನಾವ್ಯಾಕೆ ಇಂತಹ ಕೆಲಸ ಮಾಡೋಣ. ನಮಗೆ ಜನ ಬೆಂಬಲವಿದೆ. ನಮ್ಮ ಮೇಲೂ ಇಂತಹ ದಾಳಿಗಳು ಹಲವು ಬಾರಿ ನಡೆದಿದೆ’ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ