ಆ ಬಾಕ್ಸ್ ಸ್ಫೋಟಗೊಂಡಿದ್ದು ಹೇಗೆ?

ಬುಧವಾರ, 21 ಆಗಸ್ಟ್ 2019 (19:48 IST)
ಆ ಬಾಕ್ಸ್ ಸ್ಫೋಟಗೊಂಡಿದ್ದಕ್ಕೆ ಜನರು ಬೆಸ್ಕಾಂ ಮೇಲೆ ಗರಂ ಆಗಿದ್ದಾರೆ.
ವಿದ್ಯುತ್ ಕಂಬದಲ್ಲಿದ್ದ ಎಲೆಕ್ಟ್ರಾನಿಕ್ ಬಾಕ್ಸ್ ಒಂದು ಸ್ಪೋಟಗೊಂಡು ಬೆಂಕಿ ಹೊತ್ತಿ ಉರಿದಿರುವಂತಹ ಘಟನೆ ನಡೆದಿದೆ.

 ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಆನೇಕಲ್ ಪಟ್ಟಣದ ಎಸ್ ಬಿ‌ ಎಸ್ ಬ್ಯಾಂಕ್ ಮುಂಭಾಗದಲ್ಲಿದ್ದ ವಿದ್ಯುತ್  ಕಂಬದಲ್ಲಿ ಮುಂಜಾನೆ 8 ಗಂಟೆಯ ಸುಮಾರಿಗೆ ಕಂಬದಲ್ಲಿದ್ದ ಎಲೆಕ್ಟ್ರಾನಿಕ್ ಬಾಕ್ಸ್ ಸ್ಪೋಟಗೊಂಡು ಕೆಲ ಕಾಲ ಕಂಬದಲ್ಲಿಯೇ ಹೊತ್ತಿ ಉರಿದಿದೆ.

ಅಲ್ಲಿದ್ದಂತಹ ಸುತ್ತಮುತ್ತಲಿನ ಜನರು ಅಲ್ಲಿಂದ ಓಡಿ ಹೋಗಿದ್ದು ಆ ಜಾಗದಲ್ಲಿ ಬ್ಯಾಂಕ್ ಹಾಗು‌ ಸರ್ಕಾರಿ‌ ಆಸ್ಪತ್ರೆ ಇವೆ. ಕೆಲ ಕಾಲ ಜನರ ಆತಂಕಕ್ಕೆ ಕಾರಣವಾಗಿತ್ತು.   ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಓರ್ವ ಬೆಸ್ಕಾಂ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಸ್ಥಳೀಯರ ಸಹಾಯ ಪಡೆದರು.  

ಆದರೂ ಬೆಂಕಿಯನ್ನು ನಂದಿಸಲು ಸಾಧ್ಯವಾಗಲಿಲ್ಲ. ಇನ್ನು ಇಂತಹ ಅವಘಡ ನಡೆದ್ರು ಓರ್ವ ಬೆಸ್ಕಾಂ ಸಿಬ್ಬಂದಿಯನ್ನು ಮಾತ್ರ ಸ್ಥಳಕ್ಕೆ ಕಳುಹಿಸಿದ್ದು ಸ್ಥಳೀಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯವೇ ವಿದ್ಯುತ್ ಕಂಬಗಳಲ್ಲಿ ಬೆಂಕಿ‌ ಕಾಣಿಸಿಕೊಳ್ಳುವುದಕ್ಕೆ ಕಾರಣ ಅಂತ ಜನರು ದೂರಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹೋಳಾ ಹುಣ್ಣಿಮೆ ವಿಶೇಷ ನಿಮಗಿದು ಗೊತ್ತಾ?