Select Your Language

Notifications

webdunia
webdunia
webdunia
webdunia

ಲವ್ ಗೆ ಅಡ್ಡಬಂದ ಅಪ್ಪನನ್ನೇ ಕೊಂದು ಬೆಂಕಿ ಇಟ್ಟ ಮಗಳು

ಲವ್ ಗೆ ಅಡ್ಡಬಂದ ಅಪ್ಪನನ್ನೇ ಕೊಂದು ಬೆಂಕಿ ಇಟ್ಟ ಮಗಳು
ಬೆಂಗಳೂರು , ಸೋಮವಾರ, 19 ಆಗಸ್ಟ್ 2019 (19:45 IST)

ಅವಳಿನ್ನೂ ಎಸ್ ಎಸ್ ಎಲ್ ಸಿ ಓದುತ್ತಿರುವ ಹುಡುಗಿ. ಆದರೆ ಹೈಸ್ಕೂಲ್ ನಲ್ಲೇ ಸಹಪಾಠಿಯೊಂದಿಗೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಾಳೆ. ಆದರೆ ಇದಕ್ಕೆ ವಿರೋಧಿಸಿದ ತಂದೆಯನ್ನೇ ಲವರ್ ಜತೆ ಸೇರಿ ಮಗಳು ಮಾಡಬಾರದ್ದನ್ನು ಮಾಡೇ ಬಿಟ್ಟಿದ್ದಾಳೆ.

ಪ್ರಿಯಕರನ ಜೊತೆಗೆ ಸೇರಿಕೊಂಡು ಮಗಳೊಬ್ಬಳು ತನ್ನ ತಂದೆಯನ್ನೇ ಕೊಲೆ ಮಾಡಿದ್ದಾಳೆ. ಬೆಂಗಳೂರಿನ ಭಾಷ್ಯಂ ಸರ್ಕಲ್ ಹತ್ತಿರದಲ್ಲಿ ಈ ದುರ್ಘಟನೆ ನಡೆದಿದೆ.

ಬಟ್ಟೆ ವ್ಯಾಪಾರಿ ಮಾಡಿಕೊಂಡಿದ್ದ ಜೈಕುಮಾರ ಜೈನ್ ಕೊಲೆಯಾದ ತಂದೆ. ಈತನ ಮಗಳು ಹಾಗೂ ಪ್ರಿಯಕರ ಪ್ರವೀಣ್ ಎಂಬಾತನ ಜತೆ ಸೇರಿಕೊಂಡು ಮಲಗಿದ್ದಾಗ ಕೊಲೆ ಮಾಡಿ ಆ ಬಳಿಕ ಸ್ನಾನದ ಕೋಣೆಯಲ್ಲಿ ಬೆಂಕಿ ಹಚ್ಚಿದ್ದಾರೆ.

ಬೆಂಕಿ ಅಪಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಿದ್ದರು. ಆದರೆ ಪೊಲೀಸರು ಪ್ರಕರಣ ಬೆನ್ನುಹತ್ತಿ ಆರೋಪಿಗಳಾದ ಮಗಳು ಹಾಗೂ ಆಕೆಯ ಪ್ರಿಯಕರನನ್ನು ಬಂಧನ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ವರ್ಗಾವಣೆ ದಂಧೆ ವಿಚಾರ; ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ತಂದೆ, ಮಗ