Select Your Language

Notifications

webdunia
webdunia
webdunia
webdunia

ಒಬ್ಬನೊಂದಿಗೆ ಲವ್ವಿ ಡವ್ವಿ ಮತ್ತೊಬ್ಬನೊಂದಿಗೆ ಮದುವೆ : ಆ ಮಗು ಯಾರಿಗೆ ಹುಟ್ಟಿದ್ದು?

ಒಬ್ಬನೊಂದಿಗೆ ಲವ್ವಿ ಡವ್ವಿ ಮತ್ತೊಬ್ಬನೊಂದಿಗೆ ಮದುವೆ : ಆ ಮಗು ಯಾರಿಗೆ ಹುಟ್ಟಿದ್ದು?
ಬೆಂಗಳೂರು , ಶನಿವಾರ, 17 ಆಗಸ್ಟ್ 2019 (15:05 IST)
ಪ್ರಶ್ನೆ: ಸರ್… ನಾನು ತುಂಬಾ ಸಂಕಷ್ಟದಲ್ಲಿದ್ದೇನೆ. ಮಾನಸಿಕವಾಗಿ ಕುಗ್ಗಿಹೋಗಿದ್ದೇನೆ. ದಯವಿಟ್ಟು ನನ್ನ ಹೆಸರು, ವಿಳಾಸ ಕೇಳಬೇಡಿ. ವಯಸ್ಸು 25. ನಾನು ನರ್ಸಿಂಗ್ ಓದುತ್ತಿರುವಾಗಲೇ ನನ್ನ ಪ್ರಿಯತಮನಿಂದ ಗರ್ಭಿಣಿಯಾಗಿದ್ದೆ. ಈ ವಿಷಯ ತಿಳಿದು ಮನೆಯವರು ತರಾತುರಿಯಲ್ಲಿ ಬೇರೆ ಹುಡುಗನೊಂದಿಗೆ ಮದುವೆಮಾಡಿದ್ರು. ಆದರೆ ನನ್ನ ಗಂಡ ತುಂಬಾ ಬಡವರು. ಮೈ ತುಂಬಾ ಸಾಲ ಮಾಡಿಕೊಂಡಿದ್ದಾರೆ. ಗಂಡನ ಮೇಲೆ ನನಗೆ ಈಗಲೂ ಮನಸಾರೆ ಪ್ರೀತಿ ಹುಟ್ಟುತ್ತಿಲ್ಲ.


ಹಗಲಲ್ಲಿ ಮಾತ್ರವಲ್ಲ ರಾತ್ರಿ ಕೂಡ ಅವರು ನನ್ನ ಜತೆ ಸೇರುವಾಗ ನನಗೆ ನನ್ನ ಮೊದಲ ಪ್ರಿಯತಮನೇ ಮಾಡಿದ ಹಾಗಾಗುತ್ತದೆ. ದೇಹ ಈತನೊಂದಿಗೆ ಇದ್ದರೂ ಭಾವನಾತ್ಮಕವಾಗಿ ನಾನು ಆತನೊಂದಿಗೆ ಸುಖಿಸುತ್ತಿರುವಂತೆ ಆಗುತ್ತದೆ. ಮದುವೆಯಾದ ಬಳಿಕವೂ ಪ್ರಿಯತಮನೊಂದಿಗೆ ಒಂದಷ್ಟು ದಿನ ಓಡಿ ಹೋಗಿದ್ದೆ. ಆತ ಕೈ ಕೊಟ್ಟ ಬಳಿಕ ಪುನಃ ಗಂಡನ ಮನೆಗೆ ಬಂದಿರುವೆ. ನನ್ನ ಮೊದಲ ಮಗುವಿಗೆ ಪ್ರಿಯತಮ ಅಪ್ಪನಾಗಿದ್ದಾನೆ. ಆದರೆ ನನ್ನ ಗಂಡ ತಾನೇ  ಅಪ್ಪ ಅಂತ ಖುಷಿಯಾಗಿದ್ದಾನೆ. ಆದರೆ ನನಗೆ ಮಗುವನ್ನು ನೋಡಿದಾಗಲೆಲ್ಲ ನನಗೆ ನನ್ನ ಪ್ರಿಯತಮ ಬೇಕು ಎನಿಸುತ್ತಿದೆ. ಹೀಗಾಗಿ ಮಾನಸಿಕವಾಗಿ ಕುಗ್ಗಿದ್ದೇನೆ. ಪರಿಹಾರ ತಿಳಿಸಿ ಪುಣ್ಯಕಟ್ಟಿಕೊಳ್ಳಿ.




ಉತ್ತರ: ಪ್ರೀತಿಸುವಾಗ ಹಾಗೂ ಪ್ರಿಯಕರನೊಂದಿಗೆ ಸರಸ ಆಡೋವಾಗ ತೋರುವ ಧೈರ್ಯವನ್ನು ಮದುವೆ ಸಮಯದಲ್ಲಿ ಜೋಡಿಗಳು ತೋರದಿರುವುದೇ ಈ ಅವಾಂತರಕ್ಕೆ ಕಾರಣ. ಪ್ರಿಯಕರನಿಂದ ಗರ್ಭಿಣಿಯಾಗಿ ಬೇರೆ ಮದುವೆಯಾಗಿರುವ ನೀವು ಪ್ರಿಯತಮ ಹಾಗೂ ಗಂಡ ಇಬ್ಬರಿಗೂ ಮೋಸ ಮಾಡಿದ್ದೀರಿ.

ಹಳೆಯ ವಿಷಯವನ್ನು ಮನಸ್ಸಿನಿಂದ ದೂರ ಇಟ್ಟು ಗಂಡನೊಂದಿಗೆ ಹೊಂದಿಕೊಂಡು ಪ್ರೀತಿಯಿಂದ ಮುಂದಿನ ಜೀವನ ನಡೆಸಿ. ಪ್ರಿಯಕರನನ್ನು ಮರೆಯಲು ಸಾಧ್ಯವಾಗುವುದೇ ಇಲ್ಲ ಎಂದಾದರೆ ಮನೋ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಸಲಹೆ ಪಡೆದುಕೊಳ್ಳಿ. ನಿಮ್ಮ ನಡೆ ಪ್ರೀತಿಗೆ ಮಾಡಿದ ಅಪಮಾನದಂತಿದೆ. ಮುಂದಾದರೂ ಸರಿಪಡಿಸಿಕೊಂಡು ಉತ್ತಮ ಮಹಿಳೆಯಾಗಿ ಬದುಕಿ. ನಿಮ್ಮ ಕಾಮದ ಫಲದಿಂದ ಹುಟ್ಟಿರುವ ಮಗುವಿನ ಭವಿಷ್ಯ ಉತ್ತಮವಾಗಿರೋವಂತೆ ನೋಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಕುಡುಕ ಗಂಡನ್ನ ಕಟ್ಟಿಕೊಂಡಾಕೆಗೆ ಅಳಿಯನಿಂದ ಭರ್ಜರಿ ಸುಖ ಸಿಗುತ್ತಿದೆ