Publish Date: Sat, 03 Aug 2019 (15:50 IST)
Updated Date: Sat, 03 Aug 2019 (15:52 IST)
ದುಷ್ಕರ್ಮಿಗಳು ಹಾಗೂ ಕಿಡಿಗೇಡಿಗಳು ಮಾಡಿರುವ ಘಟನೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಕುರುಮರಡಿಕೆರೆ ಗ್ರಾಮ ಬಳಿ ಅರಣ್ಯದಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಚಿತ್ರದುರ್ಗ ತಾಲೂಕಿನ ಕುರುಮರಡಿಕೆರೆ ಗ್ರಾಮ ಬಳಿ ಘಟನೆ ನಡೆದಿದ್ದು, ಘಟನೆಯಲ್ಲಿ ಅರಣ್ಯ ಪ್ರದೇಶದ ನೂರಾರು ಮರಗಳು ಬೆಂಕಿಗಾಹುತಿ ಆಗಿವೆ.
ಕಿಡಿಗೇಡಿಗಳಿಂದ ಅರಣ್ಯಕ್ಕೆ ಬೆಂಕಿಯಿಟ್ಟಿರುವ ಶಂಕೆ ವ್ಯಕ್ತವಾಗಿದೆ. ತಡ ರಾತ್ರಿ ವೇಳೆ ಹೊತ್ತಿ ಉರಿದಿವೆ ಕುರುಮರಡಿಕೆರೆ ಅರಣ್ಯದಲ್ಲಿನ ಗಿಡಗಳು.
2 ದಿನಗಳ ಹಿಂದಷ್ಟೇ ಹೊರಕೆರೆ ದೇವರಪುರ ಬಳಿ ಅರಣ್ಯಕ್ಕೆ ಬೆಂಕಿ ಬಿದ್ದಿತ್ತು. ಅರಣ್ಯದಲ್ಲಿದ್ದ 300 ಕುರಿಗಳು ಸಜೀವ ದಹನ ಆಗಿದ್ದವು. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ನಿಲರ್ಕ್ಷ್ಯ ತೋರಿದ ಆರೋಪ ಕೇಳಿಬರುತ್ತಿವೆ.