ಮನೆ ಮುಂದೆ ಬೈಕ್ ನಿಲ್ಲಿಸ್ತೀರಾ? ಹಾಗಿದ್ರೆ ಹುಷಾರ್

ಸೋಮವಾರ, 22 ಜುಲೈ 2019 (17:46 IST)
ನೀವು ಮನೆ ಮುಂದೆ ಬೈಕ್ ಗಳನ್ನು ನಿಲ್ತಿಸ್ತೀದ್ದರೆ ಈ ಸುದ್ದಿ ಓದಲೇಬೇಕು.

ತಡ ರಾತ್ರಿ ಮೂರು ಬೈಕ್ ಗಳಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ದುಷ್ಕರ್ಮಿಗಳಿಂದ ಮೂರು ದ್ವಿಚಕ್ರ ವಾಹನಗಳಿಗೆ ಬೆಂಕಿ ಇಡಲಾಗಿದೆ. ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಶಂಕರ ನಗರದಲ್ಲಿ ನಡೆದ ಘಟನೆ ಇದಾಗಿದೆ.

ಬೆಂಕಿ ನೋಡಿ ಗಾಬರಿಯಾದ ವಾಹನ ಮಾಲೀಕ ಆಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದಾನೆ.

ಘಟನೆಯಲ್ಲಿ ಮೂವರ ಬೈಕ್ ಗಳು ಸುಟ್ಟು ಕರಕಲಾಗಿವೆ.

ಎ. ಕೆ. ದೊಡ್ಡನವರ್, ವಿನೋದ್ ಕುಮಾರ್ ದೊಡ್ಡನವರ್, ರಾಮು ಬಾಡಗಿ ಎಂಬುವವರಿಗೆ ಸೇರಿದ ದ್ವಿಚಕ್ರ ವಾಹನಗಳು ಬೆಂಕಿಗೆ ಸುಟ್ಟು ಕರಕಲಾಗಿವೆ. ಈ ಕುರಿತು ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ‘ರಾಜ್ಯದಲ್ಲಿರೋದು ದುಷ್ಮನ್ ಗಳ ಸರಕಾರ’