‘ರಾಜ್ಯದಲ್ಲಿರೋದು ದುಷ್ಮನ್ ಗಳ ಸರಕಾರ’

ಸೋಮವಾರ, 22 ಜುಲೈ 2019 (17:39 IST)
ರಾಜ್ಯದಲ್ಲಿ ದೋಸ್ತಿ ಸರಕಾರ ಇಲ್ಲ. ಇಲ್ಲಿರೋದು ದುಷ್ಮನ್ ಗಳ ಸರಕಾರ.

ಹೀಗಂತ ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

ಕೋಲಾರದಲ್ಲಿ ಮಾತನಾಡಿರೋ ಅವರು, ಕುರುಡುಮಲೆಯ ಗಣಪತಿಯ ಆಶೀರ್ವಾದ ಬಿಜೆಪಿ ಮೇಲಿದೆ ಅಂತ
ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದ್ದಾರೆ.

ರಾಜ್ಯದಲ್ಲಿರೋದು ದೋಸ್ತಿ ಸರ್ಕಾರವಲ್ಲ, ದುಷ್ಮನ್ ಗಳ ಸರ್ಕಾರ. ದೋಸ್ತಿಗಳು ಪರಸ್ಪರ ಮುಗಿಸಲು ಹೊರಟಿರುವುದು ಸ್ಪಷ್ಟವಾಗಿದೆ ಎಂದರು.

ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರೋ ಈಗಿನದು ಆಪರೇಷನ್ ಕಮಲವಲ್ಲ, ರಾಜಕೀಯ ದೃವೀಕರಣ.

ಈ ಹಿಂದೆ ಹಲವಾರು ಸಲ ನಡೆದಿರುವ ರಾಜಕೀಯ ದೃವೀಕರಣ ಈಗಲೂ ನಡೆಯುತ್ತಿದೆ ಅಂತ ಹೇಳಿದ್ರು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿಶ್ವಾಸಮತ ಯಾಚನೆಗೆ ಹೋಗೋದಿಲ್ಲ : BSP ಶಾಸಕ ಫುಲ್ ಸೈಲೆಂಟ್