Select Your Language

Notifications

webdunia
webdunia
webdunia
Saturday, 19 April 2025
webdunia

ಮನೆಯ ಮೇಲ್ಛಾವಣಿ ಮುರಿದ ಒಂಟಿ ಸಲಗ ಮಾಡಿದ್ದೇನು?

ಆನೆ
ಹಾಸನ , ಬುಧವಾರ, 2 ಜನವರಿ 2019 (15:04 IST)
ಗುಂಪಿನಿಂದ ಬೇರ್ಪಟ್ಟಿರುವ ಒಂಟಿ ಸಲಗವೊಂದು ಜನರಲ್ಲಿ ಇನ್ನಿಲ್ಲದ ಆತಂಕಕ್ಕೆ ಕಾರಣವಾಗಿದೆ. ಮನೆಯೊಂದರ ಮೇಲ್ಛಾವಣಿ ಕಿತ್ತುಹಾಕಿ ಪುಂಡಾಟ ನಡೆಸಿದೆ.

ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ನಿಲ್ಲದ ಕಾಡಾನೆ ದಾಂಧಲೆ ಜನರಲ್ಲಿ ಭಯಕ್ಕೆ ಕಾರಣವಾಗಿದೆ.

ವಾಸದ ಮನೆಯೊಂದರ ಮೇಲೆ ಒಂಟಿ ಸಲಗ ದಾಳಿ ನಡೆಸಿದೆ. ವೇದಾವತಿ ಎಂಬುವವರ ಮನೆಯ ಮೇಲ್ಛಾವಣಿ ಮುರಿದು ಹಾಕಿರುವ ಒಂಟಿ ಸಲಗ ದಾಂಧಲೆ ನಡೆಸಿದೆ.

ಸಕಲೇಶಪುರದ ಹೊಸ ಗದ್ದೆ ಗ್ರಾಮದಲ್ಲಿ ಬೆಳಗ್ಗೆ ನಡೆದಿರುವ ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಗಂಪಿನಿಂದ ಒಂಟಿಯಾಗಿರುವ ಪುಂಡಾನೆಯ ಪುಂಡಾಟದಿಂದ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಶೈಲ ಕ್ಷೇತ್ರಕ್ಕೆ ಪ್ರಧಾನಿಯಿಂದ ರೈಲ್ವೆ ಕೊಡುಗೆ: ಜಗದ್ಗುರುವಿನಿಂದ ಅಭಿನಂದನೆ