Select Your Language

Notifications

webdunia
webdunia
webdunia
webdunia

ಹನಿಟ್ರ್ಯಾಪ್‌ ಪ್ರಕರಣ: ತನಿಖೆಗೆ ಒತ್ತಾಯಿಸಿ ಗೃಹಮಂತ್ರಿಗೆ ರಾಜಣ್ಣ ನೀಡಿದ ಮನವಿಯಲ್ಲಿ ಏನಿದೆ‌

ಹನಿಟ್ರ್ಯಾಪ್‌ ಪ್ರಕರಣ: ತನಿಖೆಗೆ ಒತ್ತಾಯಿಸಿ ಗೃಹಮಂತ್ರಿಗೆ ರಾಜಣ್ಣ ನೀಡಿದ ಮನವಿಯಲ್ಲಿ ಏನಿದೆ‌

Sampriya

ಬೆಂಗಳೂರು , ಮಂಗಳವಾರ, 25 ಮಾರ್ಚ್ 2025 (18:18 IST)
Photo Courtesy X
ಬೆಂಗಳೂರು: ಹನಿಟ್ರ್ಯಾಪ್‌ ಪ್ರಕರಣ ಸಂಬಂಧ ಗೃಹಮಂತ್ರಿ ಜಿ ಪರಮೇಶ್ವರ್ ಅವರನ್ನು ಭೇಟಿಯಾಗಿ ದೂರು ಕೊಡುತ್ತೇನೆಂದು ಹೇಳಿದ್ದ ಸಚಿವ ರಾಜಣ್ಣ ಅವರು ಮನವಿ ನೀಡಿದ್ದಾರೆ.

ಸಂಬಂಧಿಸಿದಂತೆ ಸಚಿವ ರಾಜಣ್ಣ ಅವರು ಇಂದು ಗೃಹ ಸಚಿವ ಪರಮೇಶ್ವರ್ ಅವರಿಗೆ ದೂರು ನೀಡದೇ ಮನವಿ ಮಾತ್ರ ನೀಡಿದ್ದಾರೆ. ಮನವಿಯಲ್ಲಿ ತಮ್ಮನ್ನು ಹನಿಟ್ರ್ಯಾಪ್‌ಗೆ ಕೆಡವಲು ಯತ್ನಿಸಿದ ಪ್ರಕರಣದ ಕುರಿತು ಉನ್ನತಮಟ್ಟದ ತನಿಖೆ ನಡೆಸುವಂತೆ ಸಹಕಾರ ಸಚಿವರು ಮನವಿ ಮಾಡಿದ್ದಾರೆ.

ಇಂದು ಸಂಜೆ  ಪರಮೇಶ್ವರ್‌ ಅವರ ನಿವಾಸಕ್ಕೆ ತೆರಳಿ ಈ ವಿಚಾರದ ಬಗ್ಗೆ  ಚರ್ಚೆ ನಡೆಸಿದರು. ಮನವಿ ಸ್ವೀಕರಿಸಿದ  ಬಳಿಕ ಪರಮೇಶ್ವರ್‌ ಮಾತನಾಡಿ,  ‘ಸದನದಲ್ಲಿ ನಡೆದ ಘಟನೆ ಮತ್ತು ಅದರ ಮುಂದುವರಿದ ಭಾಗವಾಗಿ ನನಗೆ ದೂರು ನೀಡುವುದಾಗಿ ತಿಳಿಸಿದ್ದರು. ಕಾನೂನು ವ್ಯಾಪ್ತಿಯಲ್ಲಿ ನಮಗೆ ಇರುವ ಅವಕಾಶಗಳ ಕುರಿತು ಕಾನೂನು ತಜ್ಞರು ಹಾಗೂ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ನೀಡಿರೋ ಪ್ರತಿಯಲ್ಲಿ ಏನೇಲ್ಲ ಅಂಶಗಳಿದೆ ಅನ್ನೋದನ್ನ ಚರ್ಚೆ ಮಾಡಲು ಆಗುವುದಿಲ್ಲ. ಮನವಿ ಆಧಾರದ ಮೇಲೆ ಏನ್ ಮಾಡಬೇಕು, ಯಾರಿಗೆ ಅದನ್ನು ಕಳುಹಿಸಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪರೀಕ್ಷೆಗಾಗಿ ಪ್ರಾಣದ ಹಂಗು ತೊರೆದು ಬಸ್ ಹಿಂದೆ ಓಡಿದ ವಿದ್ಯಾರ್ಥಿನಿ, ಭಯಾನಕ Video ಇಲ್ಲಿದೆ