Select Your Language

Notifications

webdunia
webdunia
webdunia
webdunia

ಹಲೋ ಎಂದರೇ "ಹನಿ ಟ್ರಾಪ್‌" ಮಾಡುವುದಾ: ಡಿಕೆ ಶಿವಕುಮಾರ್ ಮಾತಿನ ಒಳಾರ್ಥವೇನು

Honey Trap Case, JDS, DCM DK Shivkumar,

Sampriya

ಬೆಂಗಳೂರು , ಶುಕ್ರವಾರ, 21 ಮಾರ್ಚ್ 2025 (21:06 IST)
Photo Courtesy X
ಬೆಂಗಳೂರು: ಹಲೋ ಎಂದರೇ "ಹನಿ ಟ್ರಾಪ್‌" ಮಾಡುವುದಾ. ಡಿಸಿಎಂ ಡಿಕೆ ಶಿವಕುಮಾರ್  ಅವರ ಈ ಮಾತಿನ ಒಳಾರ್ಥ ವೇನು ಎಂದು ಜೆಡಿಎಸ್ ಪ್ರಶ್ನಿಸಿದೆ. ಹಲೋ ಎಂದರೇ "ಹನಿ ಟ್ರಾಪ್‌" ಮಾಡುವುದಾ ?

ಸುಮ್ಮನೆ ಹನಿಟ್ರ್ಯಾಪ್ ಮಾಡುವವರು ನಿಮ್ಮ ಬಳಿ ಬರುತ್ತಾರೆಯೇ? ಯಾರಾದರೂ ಹಲೋ ಎಂದರೆ ಅವರು ಹಲೋ ಎನ್ನುತ್ತಾರೆ.  ನೀವು ಪ್ರತಿಕ್ರಿಯೆ ನೀಡಲಿಲ್ಲ ಎಂದರೆ ಯಾರಾದರೂ ಮಾತನಾಡಿಸುತ್ತಾರಾ ಎಂದು ಹನಿಟ್ರ್ಯಾಪ್ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದರು.

ಇದೀಗ ಡಿಸಿಎಂ ಹೇಳಿಕೆ ಅರ್ಥವೇನು ಎಂದು ಜೆಡಿಎಸ್‌ ಪ್ರಶ್ನೆ ಮಾಡಿದೆ.

ಹಲೋ ಎಂದರೇ "ಹನಿ ಟ್ರಾಪ್‌" ಮಾಡುವುದಾ ?


ಡಿಸಿಎಂ ಡಿಕೆ ಶಿವಕುಮಾರ್‌ ಅವರ ಈ ಮಾತಿನ ಒಳಾರ್ಥ ಏನು ?

"ಮಾಡಿದ್ದುಣ್ಣೋ ಮಹರಾಯ" ಎಂಬ ಮಾತಿನ "ಗೂಡಾರ್ಥ" ಏನನ್ನು ಸೂಚಿಸುತ್ತದೆ.

ಅಂದರೇ ಸಚಿವ ರಾಜಣ್ಣ ಅವರ ಮೇಲೆ "ಹನಿ ಟ್ರಾಪ್‌" ನಡೆದಿರುವುದು ನಿಜ ಎಂಬುದು ಸತ್ಯವೇ ಆಗಿದೆ.

ಉಪಮುಖ್ಯಮಂತ್ರಿಗಳ ಈ ಉಡಾಫೆ, ಸೊಕ್ಕಿನ ಮಾತುಗಳೇ ಅದನ್ನು ಪುಷ್ಟೀಕರಿಸುವಂತಿದೆ.

ರಾಜಕೀಯ ಪ್ರತಿಸ್ಪರ್ಧಿಗಳನ್ನು ಮಟ್ಟಹಾಕಲು ಈ ರೀತಿಯ ನೀಚ ಮಟ್ಟಕ್ಕಿಳಿದು ಕೊಳಕು ರಾಜಕಾರಣ ಮಾಡುವುದು ಕಪ್ಪು ಚುಕ್ಕೆ.  

ಸಿಎಂ ಸಿದ್ದರಾಮಯ್ಯ ಅವರೇ, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರೇ ಸಚಿವರ ಮೇಲೆ ನಡೆದಿರುವ "ಹನಿ ಟ್ರಾಪ್‌" ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಜಾತ್ಯತೀತ ಜನತಾದಳ ಪಕ್ಷವು ಆಗ್ರಹಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆಯ ಬಂದ್‌ಗೆ ನಮ್ಮ ಬೆಂಬಲವಿಲ್ಲ: ಡಿಸಿಎಂ ಶಿವಕುಮಾರ್‌