Select Your Language

Notifications

webdunia
webdunia
webdunia
webdunia

ಸ್ಪೀಕರ್ ಪೀಠಕ್ಕೆ ಅಗೌರವ: 6 ತಿಂಗಳು ಅಮಾನತುಗೊಂಡ 18ಶಾಸಕರು ಇವರೇ

Karnataka Budget Session 2025, Speaker UT Khadar, Honey Trap Case

Sampriya

ಬೆಂಗಳೂರು , ಶುಕ್ರವಾರ, 21 ಮಾರ್ಚ್ 2025 (17:05 IST)
Photo Courtesy X
ಬೆಂಗಳೂರು: ವಿಧಾನಸಭೆಯಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಹಿನ್ನೆಲೆ ಬಿಜೆಪಿಯ 18 ಬಿಜೆಪಿ ಶಾಕಸರ ವಿರುದ್ಧ ಸ್ಪೀಕರ್‌ ಖಾದರ್‌ ಕ್ರಮ ಕೈಗೊಂಡು, 6 ತಿಂಗಳು ಅವರನ್ನು ಅಮಾನತು ಮಾಡಿ ಸ್ಪೀಕರ್ ಆದೇಶ ಹೊರಡಿಸಿದರು.

ಸಚಿವ ಕೆಎನ್‌ ರಾಜಣ್ಣ ಅವರು ತನ್ನನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂಬ ಗಂಭೀರ ವಿಚಾರವನ್ನು ಹೇಳಿದ್ದರು. ಹನಿಟ್ರ್ಯಾಪ್ ಯತ್ನ ವಿಚಾರವಾಗಿ ಬಿಜೆಪಿ ಸದನದಲ್ಲಿ ಗದ್ದಲ ಉಂಟಾಗಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ಧರಣಿ ನಡೆಸಿದ್ದರು. ಈ‌ ಸಂದರ್ಭದಲ್ಲಿ ಸ್ಪೀಕರ್ ಪೀಠದ ಮೇಲೆ ಏರಿ ಬಿಜೆಪಿ ಶಾಸಕರು ಗದ್ದಲ ಉಂಟು ಮಾಡಿದ್ದರು. ಅಲ್ಲದೆ, ಕಾಗದ ಪತ್ರಗಳನ್ನು ಹರಿದು ಹಾಕಿ ಪೀಠಕ್ಕೆ ಎಸೆದಿದ್ದರು. ಬಳಿಕ ಸದನವನ್ನು ಮುಂದೂಡಲಾಗಿತ್ತು.

ಇದಾಗ ಬೆನ್ನಲ್ಲೇ ಸ್ಪೀಕರ್ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಸಭೆ ನಡೆಸಿದ್ದರು. ಸಭೆಯಲ್ಲಿ ಅಮಾನತು ನಿರ್ಧಾರ ಕೈಗೊಳ್ಳಲಾಗಿತ್ತು.

ಭೋಜನದ ವಿರಾಮದ ಬಳಿಕ ಸದನ ಮತ್ತೇ ಆರಂಭಗೊಂಡಾಗ ಪೀಠಕ್ಕೆ ಅಗೌರವ ತೋರಿಸಿದರೆ ಸಹಿಸೋದಿಲ್ಲ. ಈ ನಿಟ್ಟಿನಲ್ಲಿ 18 ಶಾಸಕನ್ನು ಆರು ತಿಂಗಳ ಕಾಲ ಅಮಾನತು ಮಾಡಲಾಗುವುದು  ಎಂದು ಆದೇಶ ಪ್ರಕಟಿಸಿದರು.

ಅಮಾನತು ಆದ ಶಾಸಕರ ಮಾಹಿತಿ ಇಲ್ಲಿದೆ.

    ದೊಡ್ಡಣ್ಣ ಗೌಡ ಪಾಟೀಲ್
    ಸಿ ಕೆ ರಾಮಮೂರ್ತಿ
    ಅಶ್ವತ್ಥ ನಾರಾಯಣ
    ಎಸ್ ಆರ್ ವಿಶ್ವನಾಥ್
    ಬೈರತಿ ಬಸವರಾಜ
    ಎಂ ಆರ್ ಪಾಟೀಲ್
    ಚನ್ನಬಸಪ್ಪ
    ಬಿ ಸುರೇಶ್ ಗೌಡ
    ಉಮನಾಥ್ ಕೋಟ್ಯಾನ್
    ಶರಣು ಸಲಗಾರ್
    ಶೈಲೇಂದ್ರ ಬೆಲ್ದಾಳೆ
    ಯಶಪಾಲ್ ಸುವರ್ಣ
    ಹರೀಶ್ ಬಿಪಿ
    ಡಾ. ಭರತ್ ಶೆಟ್ಟಿ
    ಮುನಿರತ್ನ
    ಬಸವರಾಜ ಮತ್ತಿಮೋಡ್
    ಧೀರಜ್ ಮುನಿರಾಜು
    ಡಾ ಚಂದ್ರು ಲಮಾಣಿ

Share this Story:

Follow Webdunia kannada

ಮುಂದಿನ ಸುದ್ದಿ

ಹನಿಟ್ರ್ಯಾಪ್‌, ಯಾರಾದರೂ ಹಲೋ ಎಂದರೆ ಅವರು ಹಲೋ ಎನ್ನುತ್ತಾರೆ: ಡಿಕೆ ಶಿವಕುಮಾರ್ ಹೀಗಂದಿದ್ಯಾಕೆ