Select Your Language

Notifications

webdunia
webdunia
webdunia
webdunia

ಸದನದಲ್ಲಿ ಸದ್ದು ಮಾಡಿದ ಹನಿಟ್ರ್ಯಾಪ್: ತನಿಖೆಗೆ ಆದೇಶಿಸಿದ ಡಾ.ಜಿ.ಪರಮೇಶ್ವರ್‌

Honey Trap Case, HomeMinister Dr.G.Parameshwar, DCM DK Shivkumar

Sampriya

ಬೆಂಗಳೂರು , ಗುರುವಾರ, 20 ಮಾರ್ಚ್ 2025 (19:26 IST)
Photo Courtesy X
ಬೆಂಗಳೂರು: ಸದನದಲ್ಲಿ ಇಂದು ಹನಿಟ್ಯ್ಯಾಪ್ ಪ್ರಕರಣ ಸದ್ದು ಮಾಡಿದ ಬೆನ್ನಲ್ಲೇ ಈ ಬಗ್ಗೆಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಇಂತಹ ಕೆಟ್ಟ ಪ್ರವೃತ್ತಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ದೇಶದಲ್ಲಿ ನಮ್ಮ ಸದನಕ್ಕೆ ಅತ್ಯುನ್ನತ ಗೌರವವಿದೆ. ನಮ್ಮ ಸದನ ಹಾಗೂ ಸದಸ್ಯರ ಘನತೆ ಕಾಪಾಡುವ ದೃಷ್ಟಿಯಿಂದ ಈ ಘಟನೆಗಳಿಗೆ ಕಡಿವಾಣ ಹಾಕಬೇಕಿದೆ. ಗಂಭೀರ ವಿಚಾರವಾಗಿರುವ ಇದನ್ನು ಉನ್ನತ ಮಟ್ಟದ ತನಿಖೆಗೆ ಆದೇಶಿಸುವೆ ಎಂದು ಪರಮೇಶ್ವರ್ ವಿಧಾನಸಭೆಯಲ್ಲಿ ತಿಳಿಸಿದರು.

ಸಹಕಾರ ಸಚಿವ ಕೆಎನ್‌ ರಾಜಣ್ಣ ಅವರು ತನ್ನ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ. ಅದಲ್ಲದೆ ರಾಜ್ಯದ 48 ರಾಜಕೀಯದ ನಾಯಕರನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಗಂಭೀರ ವಿಚಾರವನ್ನು ಹೇಳಿದರು.

ಇದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರು ಪ್ರತಿಕ್ರಿಯಿಸಿ, ಹನಿಟ್ರ್ಯಾಪ್ ಮೂಲಕ ರಾಜಕೀಯ ವಿರೋಧಿಗಳನ್ನು ಬ್ಲ್ಯಾಕ್‌ಮೇಲೆ ಮಾಡಿ, ಅವರ ರಾಜಕೀಯ ಬದುಕನ್ನು ಹಾಳು ಮಾಡುವ ಪ್ರವ್ರತಿ ಶುರುವಾಗಿದೆ ಎಂದರು.

ಇನ್ನು ವಿಧಾನಸೌಧದಲ್ಲಿ ಶಾಸಕ ಮುನಿರತ್ನ ಅವರು ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಹನಿಟ್ರ್ಯಾಪ್ ಆರೋಪವನ್ನು ಮಾಡಿದರು. ನನ್ನ ಮೇಲೆ ರೇಪ್ ಕೇಸ್ ಹಾಕಿದ್ದರು. ಅದಲ್ಲದೆ ಹನಿಟ್ಯ್ರಾಪ್ ಕೂಡಾ ನಡೆಸುತ್ತಿದ್ದಾರೆ. ಇದಕ್ಕೆ ಡಿಕೆ ಸುರೇಶ್‌ ಅವರ ಬೆಂಬಲವೂ ಇದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್ ಹನಿಟ್ರ್ಯಾಪ್‌ ಟೀಂ ರಾತ್ರಿ 2ಕ್ಕೆ ಸಭೆ ಸೇರುತ್ತೆ: ಮುನಿರತ್ನ ಹೊಸ ಬಾಂಬ್‌