Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಹನಿಟ್ರ್ಯಾಪ್‌ ಟೀಂ ರಾತ್ರಿ 2ಕ್ಕೆ ಸಭೆ ಸೇರುತ್ತೆ: ಮುನಿರತ್ನ ಹೊಸ ಬಾಂಬ್‌

DCM DK Shivkumar

Sampriya

ಬೆಂಗಳೂರು , ಗುರುವಾರ, 20 ಮಾರ್ಚ್ 2025 (19:06 IST)
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರು ನನ್ನ ಮೇಲೆ ರೇಪ್ ಹಾಕಿಸಿದ್ದು ಎಂದು ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸ್ ಕಮೀಷನರ್‌ಗೆ ಹೇಳಿ ಡಿಸಿಎಂ ಡಿ.ಕೆ.ಶಿವಕುಮಾರ್ ನನ್ನ ಮೇಲೆ ರೇಪ್ ಕೇಸ್ ಹಾಕಿಸಿದ್ದರು. ಅಟ್ರಾಸಿಟಿ ಕೇಸಲ್ಲಿ ಕೋರ್ಟ್‌ಗೆ ಹೋಗಿದ್ದಾಗ ರಾಜೀನಾಮೆ ಕೊಟ್ಟರೆ ರೇಪ್ ಕೇಸ್ ಹಾಕಲ್ಲ ಎಂದು ಡಿವೈಎಸ್‌ಪಿ ಧರ್ಮೇಂದ್ರ ನೇರವಾಗಿ ಈ ಮಾತನ್ನು ಹೇಳಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಸೇರಿ ನನಗೆ ಮೊಟ್ಟೆ ಹೊಡೆಯಲು ಹಾಗೂ ಮಸಿ ಬಳಿಯಲು ಎಲ್ಲದಕ್ಕೂ ರೇಟ್ ಫಿಕ್ಸ್ ಮಾಡಿದ್ದಾರೆ. ನನ್ನ ಮೇಲೆ ಸಿಬಿಐ ತನಿಖೆ ಮಾಡಿಸಿ ರೇಪ್ ಕೇಸ್ ಹಾಕಿಸಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದರು.

ಡಿಕೆಶಿ ಮಾಡಿರುವ ಮಹಾ ಪಾಪ, ಎಂದಿಗೂ ಅವರನ್ನ ಬಿಡಲ್ಲ. ನಿಮ್ಮ ಕುಟುಂಬ ಬೆಳೆಯಬೇಕು, ನೀವು ಇನ್ನೂ ಮುಂದೆ ಇಂತಹ ನೀಚ ಕೆಲಸ ಮಾಡಬಾರದು. ನಾನು ಅತ್ಯಾಚಾರ ಮಾಡಿದ್ದರೆ ನಾನು ಸರ್ವನಾಶ ಆಗುತ್ತೇನೆ, ಹುಳ ಬಿದ್ದು ಸಾಯಬೇಕು. ಇ್ಲಲದಿದ್ದರೆ ನೀವು ಹುಳ ಬಿದ್ದು ಸಾಯುತ್ತೀರಾ ಎಂದು ಶಾಪ ಹಾಕಿದರು.

ಡಿಕೆಶಿ ಬಳಿ ₹20 ಇಲ್ಲದಾಗಲೂ ನೋಡಿದವರು ರಾಜಣ್ಣ ಅವರು. ದೇವರು ಇಂದು ನಿಮ್ಮನ್ನೂ ಈ ಮಟ್ಟಕ್ಕೆ ತಂದಿದ್ದಾನೆ. ಆದರೆ ನೀವು ಈ ರೀತಿಯ ಕೀಳು ಮಟ್ಟಕ್ಕೆ ಹೋಗಬಾರದು.  ಇದು ಡಿಕೆ ಶಿವಕುಮಾರ್ ಹನಿಟ್ರ್ಯಾಪ್‌ ಟೀಂ, ರಾತ್ರಿ 2 ಗಂಟೆಗೆ ಹನಿಟ್ರ್ಯಾಪ್‌ ಟೀಂ ಜೊತೆ ಸಭೆ ಮಾಡ್ತಾರೆ ಎಂದು ಹೇಳಿದರು

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಮೇಲೆ ಹನಿಟ್ರ್ಯಾಪ್‌ಗೆ ಯತ್ನ: ಸದನದಲ್ಲಿ ಹೊಸ ಬಾಂಬ್ ಸಿಡಿಸಿದ ಕೆಎನ್‌ ರಾಜಣ್ಣ