Select Your Language

Notifications

webdunia
webdunia
webdunia
webdunia

ಬಿವೈ ವಿಜಯೇಂದ್ರ ಮೊದಲು ನಾಡಗೀತೆಯನ್ನು ಸರಿಯಾಗಿ ಓದಲಿ: ಡಿಕೆ ಶಿವಕುಮಾರ್ ಕೌಂಟರ್‌

Karnataka DCM DK Shivkumar, BJP President BY Vijayendra, Karnataka State Anthem

Sampriya

ಗದಗ , ಭಾನುವಾರ, 16 ಮಾರ್ಚ್ 2025 (17:33 IST)
Photo Courtesy X
ಗದಗ:  "ಸಮಬಾಳು ಸಮಪಾಲು ಎನ್ನುವ ವಿಜೆಯೇಂದ್ರ ಅವರು ಅಲ್ಪಸಂಖ್ಯಾತರಲ್ಲಿ ಯಾರದರೊಬ್ಬರನ್ನು ಎಂಎಲ್‌ಸಿ, ರಾಜ್ಯಸಭಾ ಸದ್ಯಸರನ್ನಾಗಿ, ಕೇಂದ್ರ ಸಂಪುಟದಲ್ಲಿ ಮಂತ್ರಿ ಮಾಡಿಕೊಳ್ಳಲಿ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು.

ಗದಗದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಎಕ್ಸ್ (ಟ್ವೀಟ್) ಬಗ್ಗೆ ಕೇಳಿದಾಗ, "ಅವರ ಪಕ್ಷದಲ್ಲಿ ಇಬ್ಬರು ಕ್ರಿಶ್ಚಿಯನ್ಸ್, ಮೂರು ಜನ ಮುಸ್ಲಿಮರಿಗೆ ಅವಕಾಶ ಮಾಡಿಕೊಡಲಿ. ಹೀಗೆ ಮಾಡಿದಾಗ ಮಾತ್ರ ವಿಜಯೇಂದ್ರ ಅವರಿಗೆ ಸಮಬಾಳು ಸಮಪಾಲು ಎಂದು ಮಾತನಾಡಲು ಒಂದು ಅವಕಾಶ ಸಿಗುತ್ತದೆ" ಎಂದರು.


ವಿಜಯೇಂದ್ರ ಕುವೆಂಪು ಅವರು ಬರೆದಿರುವ ನಾಡಗೀತೆಯನ್ನು ವಿಜಯೇಂದ್ರ ಸರಿಯಾಗಿ ಓದಲಿ. ಯಾರು, ಯಾರು ಸೇರಿದರೆ ಶಾಂತಿಯ ತೋಟ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಲಿ. ಇನ್ನು ಪಾಪ ಈಗ ಪಕ್ಷದ  ಅಧ್ಯಕ್ಷರಾಗಿದ್ದಾರೆ. ಅವರ ಲೆವೆಲ್‌ನಲ್ಲಿ ಇರಲಿ" ಎಂದರು.

"ಮುಸ್ಲಿಂ, ಸಿಕ್, ಜೈನ, ಪಾರ್ಸಿ, ಬೌದ್ದರು ಇವರೆಲ್ಲಾ ನಮ್ಮ‌ ದೇಶದ ಹಾಗೂ ಕರ್ನಾಟಕದ ಪ್ರಜೆಗಳು. ನಾವು ಎಲ್ಲಾ ಅಲ್ಪಸಂಖ್ಯಾತರು, ಹಿಂದುಳಿದವರ ಬಗ್ಗೆ ಚಿಂತನೆ ಮಾಡುತ್ತೇವೆ" ಎಂದು ಹೇಳಿದರು.

ಪಕ್ಷದ‌ ಅಧ್ಯಕ್ಷರಾಗಿ 5 ವರ್ಷ ಪೂರ್ಣಗೊಂಡ ಹಿನ್ನೆಲೆ ಉತ್ತರ ಕರ್ನಾಟಕ ಭಾಗದಲ್ಲಿ ಸಂಭ್ರಮಾಚರಣೆ ಬಗ್ಗೆ ಬೆಂಬಲಿಗರ ಒತ್ತಾಸೆಯ ಬಗ್ಗೆ ಕೇಳಿದಾಗ, "ಈ ಬಗ್ಗೆ  ಹಲವರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಮೊದಲು ಮಂತ್ರಿಗಳಿಗೆ ಪ್ರತಿ ವಿಧಾನಸಭಾ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಎಂದು ಸೂಚನೆ ಕೊಟ್ಟಿದ್ದು,‌ ಇದು ಮೊದಲು ನಡೆಯಲಿ. ಆ ನಂತರ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷಗಳಾಗಿದ್ದು ಈ ಸಂಭ್ರಮಾಚರಣೆಯನ್ನು ಮಾಡಲೇಬೇಕಾಗಿದೆ. ಇದನ್ನೂ ಮಾಡುತ್ತೇವೆ" ಎಂದರು.

ಅಲ್ಪಸಂಖ್ಯಾತ ಮೀಸಲಾತಿಯಿಂದ ಸಂವಿಧಾನನಕ್ಕೆ ಕಾಂಗ್ರೆಸ್ ತಿಲಾಂಜಲಿ ಇಟ್ಟಿದೆ ಎನ್ನುವ ಬಿಜೆಪಿಯ ರವಿಶಂಕರ್ ಪ್ರಸಾದ್ ಅವರ ಟೀಕೆಯ ಬಗ್ಗೆ ಕೇಳಿದಾಗ, "ನಿಮ್ಮ (ಮಾಧ್ಯಮದವರ) ಮಾತು ಕೇಳುವುದಿಲ್ಲ. ಅವರು ಏನು ಹೇಳಿದ್ದಾರೆ ಎಂದು ನಾನು ತಿಳಿದುಕೊಂಡು ಮಾತನಾಡುತ್ತೇನೆ" ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಹಬ್ಬಿರುವ ಡ್ರಗ್ಸ್ ಜಾಲವನ್ನು ಬೇರು ಸಹಿತ ಕಿತ್ತು ಬಿಸಾಕುತ್ತೇವೆ: ಸಿಎಂ ಸಿದ್ದರಾಮಯ್ಯ