Select Your Language

Notifications

webdunia
webdunia
webdunia
webdunia

ಹನಿಮೂನ್ ದಿನ ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ತಿಳಿಯಿತು. ಏನು ಮಾಡಲಿ?

ಹನಿಮೂನ್ ದಿನ ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ತಿಳಿಯಿತು. ಏನು ಮಾಡಲಿ?
ಬೆಂಗಳೂರು , ಮಂಗಳವಾರ, 26 ಮಾರ್ಚ್ 2019 (10:19 IST)
ಬೆಂಗಳೂರು : ಪ್ರಶ್ನೆ : ನನ್ನದು ಲವ್ ಮ್ಯಾರೇಜ್. ನನ್ನ ಪತ್ನಿ ತಾನು ಕೆಲಸ ಮಾಡುವ ಸ್ಥಳದಲ್ಲಿ ಬೇರೆ ವ್ಯಕ್ತಿಯ ಜೊತೆ ಸಂಬಂಧ ಹೊಂದಿದ್ದಳು ಎಂಬುದು ನನಗೆ ಹನಿಮೂನ್ ದಿನ ತಿಳಿಯಿತು. ನಾನು ಈ ಬಗ್ಗೆ ಆಕೆಯ ಬಳಿ ಕೇಳಲಿಲ್ಲ. ಆದರೆ  ಒಮ್ಮೆ ನಾನು ಅದನ್ನು ಕಣ್ಣಾರೆ ನೋಡಿದೆ. ನಂತರ ಆಕೆ ಆತನ ಸಂಬಂಧವನ್ನು ಬಿಟ್ಟುಬಂದಿರುವುದಾಗಿ ಹೇಳುತ್ತಿದ್ದಾಳೆ. ಈ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ ನನಗೆ ಅಪನಂಬಿಕೆಯಿಂದ ಜೀವನ ನಡೆಸಲು ಇಷ್ಟವಿಲ್ಲ. ದಯವಿಟ್ಟು ಪರಿಹಾರ ತಿಳಿಸಿ.

ಉತ್ತರ :  ಮೊದಲನೇಯದಾಗಿ ಇಲ್ಲಿ ನಿಮ್ಮ ಭಾವನೆಗಳನ್ನು, ನೋವನ್ನು ವ್ಯಕ್ತಪಡಿಸುವುದು ಅವಶ್ಯಕವಾದ್ದರಿಂದ ನೀವು ನಿಮ್ಮ ಕೋಪವನ್ನು ಪಕ್ಕಕ್ಕಿಟ್ಟು, ಚುಚ್ಚು ಮಾತುಗಳನ್ನಾಡದೇ ನನಗೆ ಮೋಸ ಮಾಡಲು ನಿನಗೆ ಹೇಗೆ ಮನಸ್ಸು ಬಂತು ಎಂಬುದನ್ನು ಆಕೆಯ ಜತೆ ನಿಖರವಾಗಿ ಹಂಚಿಕೊಳ್ಳಿ. ಹಾಗೇ ಆಕೆಯನ್ನು ಕ್ಷಮಿಸಲು ಸಾಧ್ಯವೇ ಎಂದು ನಿಮ್ಮನ್ನ ನೀವು ಕೇಳಿಕೊಳ್ಳಿ. ಈ ಪರಿಸ್ಥಿತಿಯನ್ನು ನಿಭಾಯಿಸಲು ನಿಮಗೆ ತುಂಬಾ ಸಮಯ ಬೇಕಾಗುತ್ತದೆ. ಆದರೆ ಸಂಗಾತಿಯನ್ನು ಆರಿಸುವಲ್ಲಿ ಮತ್ತೆ ಸೋಲಬೇಡಿ.

 

ಒಂದು ವೇಳೆ ನಿಮಗೆ ಈ ಬಗ್ಗೆ ನಿರ್ಧಾರ ಮಾಡಲು ಆಗದಿದ್ದಾಗ ಒಮ್ಮೆ ಕೌನ್ನಿಲರ್ ನ್ನು ಭೇಟಿ ಮಾಡಿ ಅವರ ಸಲಹೆ ಪಡೆಯಿರಿ. ಇದರಿಂದ ನಿಮ್ಮ ಸಂಬಂಧವನ್ನು ಮುಂದುವರಿಸಬೇಕೆ? ಬೇಡವೇ ಎಂಬುದನ್ನು ನಿರ್ಧರಿಸಲು ಸಹಾಯವಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಪತಿ ವಿದೇಶದಲ್ಲಿರುವುದರಿಂದ ಲೈಂಗಿಕ ಜೀವನದಿಂದ ವಂಚಿತಳಾಗಿದ್ದೇನೆ. ಏನು ಮಾಡಲಿ?