Select Your Language

Notifications

webdunia
webdunia
webdunia
webdunia

ಹತ್ತು ಜನರೊಂದಿಗೆ 10 ಬಾರಿ ಹನಿಮೂನ್ ಮಾಡಿದ ಖಿಲಾಡಿ

ಹತ್ತು ಜನರೊಂದಿಗೆ 10 ಬಾರಿ ಹನಿಮೂನ್ ಮಾಡಿದ ಖಿಲಾಡಿ
ಕ್ಯೂಬಾ , ಶನಿವಾರ, 9 ಮಾರ್ಚ್ 2019 (17:15 IST)
ಗಂಡ ಮಧುಚಂದ್ರಕ್ಕೆ (honeymoon) ಕರೆದೊಯ್ದಿಲ್ಲಾ ಎಂದು ಕೆಂಡಕಾರುವ ಪತ್ನಿಯರಿಗೊಂದು ಹೊಟ್ಟೆಕಿಚ್ಚಿನ ಸುದ್ದಿ. ಕ್ಯೂಬಾದ ಮಹಿಳೆಯೊಬ್ಬಳು ಬರೋಬ್ಬರಿ 10 ಸಲ ಮಧುಚಂದ್ರ ಯಾತ್ರೆ ಮುಗಿಸುವಲ್ಲಿ ಯಶಸ್ವಿಯಾಗಿದ್ದಾಳಂತೆ.

ಈಕೆ 10 ಬಾರಿ ಮಧುಚಂದ್ರ ಮುಗಿಸಿದ್ದು 10 ಜನ ಗಂಡಂದಿರೊಂದಿಗೆ ಎಂಬುದೇ ಕರಾಮತ್ತಿನ ವಿಷಯ. ಇಲ್ಲಿನ ಎನೂಸಿ ಲೋಪೆಜ್ ಎಂಬ 26 ವರ್ಷದ ಯುವತಿ ತಾನಿನ್ನೂ ಕನ್ಯೆ ಎಂದು ಘೋಷಿಸಿಕೊಳ್ಳುತ್ತಲೇ ಕಳೆದ 4 ವರ್ಷದ ಅವಧಿಯಲ್ಲಿ 10 ಪುರುಷರನ್ನು ವರಿಸಿದ್ದಳಂತೆ.

ಮದುವೆಯಾಗಿದ್ದು ಸಾಲದೆಂಬಂತೆ ಪ್ರತಿಯೊಬ್ಬರೊಂದಿಗೂ ಮೋಜಿನ honeymoon ಮುಗಿಸಿದ ಭಾರಿ ಗಟ್ಟಿಗಿತ್ತಿ ಎನ್ನಿಸಿಕೊಂಡಿದ್ದಾಳೆ. ಮೊದಲು ಬೇರೆ ಬೇರೆ ದೇಶದ ವ್ಯಕ್ತಿಗಳೊಂದಿಗೆ ಮದುವೆ, ಕೊನೆಗೆ ಮಧುಚಂದ್ರ ಆಮೇಲೆ, ವೀಸಾ ಮತ್ತಿತರ ಕೆಲಸಕ್ಕೆ ಹಣ ಬೇಡುವುದು, ಕೊಡಲಿಲ್ಲವೆಂದರೆ ದೂರು ಕೊಡುವುದಾಗಿ ಬೆದರಿಕೆ ಹಾಕುವುದು ಇವಳ ಕಾಯಕವಾಗಿತ್ತಂತೆ. ಯಾರಿಗೂ ವಿಚ್ಛೇದನ ಕೊಡದೆಯೇ ಈ ‘Honey’ ಮತ್ತೊಬ್ಬರನ್ನು ವರಿಸುತ್ತಿದ್ದಳಂತೆ. ವಿಷಯ ಪೊಲೀಸರಿಗೆ ತಿಳಿದ ಮೇಲೆ ಇದೀಗ ಜೈಲಿನಲ್ಲಿ ‘Honey’ ಇಲ್ಲದೆ ರಾತ್ರಿ ಹೊತ್ತು ‘Moon’ ನೋಡ್ತಾ ಇದ್ದಾಳಂತೆ.

        

Share this Story:

Follow Webdunia kannada

ಮುಂದಿನ ಸುದ್ದಿ

ಹಾಸಿಗೆ ಸುಖ ಬೇಕಾದ್ರೆ ಇವನ್ನು ಮಾಡಲೇಬೇಡಿ