ಮುಂಬೈ: ಎಷ್ಟೇ ದೊಡ್ಡ ಸ್ಟಾರ್ ಆದರೂ ಹೆಂಡತಿಗೆ ಯಾವತ್ತಿಗೂ ಗಂಡನೇ. ಇದು ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ವಿಚಾರದಲ್ಲೂ ನಿಜವಾಗಿದೆ.
									
										
								
																	
ನಟ ಅಕ್ಷಯ್ ಮೈ ಮೇಲೆಲ್ಲಾ ಬೆಂಕಿ ಹಚ್ಚಿಕೊಂಡು ಸ್ಟೇಜ್ ಮೇಲೆ ರಾಂಪ್ ವಾಕ್ ಮಾಡಿ ಆ ಫೋಟೋಗಳನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದರು. ಇದನ್ನು ನೋಡಿ ಪತ್ನಿ ಟ್ವಿಂಕಲ್ ಖನ್ನಾ ಕೆಂಡಾಮಂಡಲರಾಗಿದ್ದಾರೆ.
									
			
			 
 			
 
 			
					
			        							
								
																	‘ನಿಮ್ಮಷ್ಟಕ್ಕೆ ನೀವೇ ಈ ರೀತಿ ಬೆಂಕಿ ಹಚ್ಚಿಕೊಳ್ಳಲು ತೀರ್ಮಾನಿಸಿಕೊಂಡಿರಾ? ಮನೆಗೆ ಬನ್ನಿ, ಈವತ್ತು ಜೀವಂತ ಬಂದರೆ ನಿಮಗೆ ತಕ್ಕ ಶಾಸ್ತಿ ಮಾಡುವೆ. ದೇವರೇ ಕಾಪಾಡು’ ಎಂದು ಟ್ವಿಂಕಲ್ ಟ್ವಿಟರ್ ನಲ್ಲಿಯೇ ಪತಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
									
										
								
																	ಟ್ವಿಂಕಲ್ ಖನ್ನಾರ ಟ್ವೀಟ್ ನೋಡಿ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದು, ಮೇಡಂ, ದಯವಿಟ್ಟು ನಮಗೆ ಸಾರ್ ಮನೆಗೆ ಬಂದಾಗ ಏನಾಯಿತು ಎಂದು ಅಪ್ ಡೇಟ್ ಮಾಡಿ ಎಂದು ಮನವಿ ಮಾಡಿದ್ದಾರೆ!
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.